alex Certify ರೈಲ್ವೆ ಪ್ರಯಾಣಿಕರಿಗೆ ಗುಡ್​ನ್ಯೂಸ್​: ಕ್ರಿಸ್​ಮಸ್​ ಹಾಗೂ ಹೊಸ ವರ್ಷದ ಪ್ರಯುಕ್ತ ವಿಶೇಷ ರೈಲು ಸಂಚಾರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲ್ವೆ ಪ್ರಯಾಣಿಕರಿಗೆ ಗುಡ್​ನ್ಯೂಸ್​: ಕ್ರಿಸ್​ಮಸ್​ ಹಾಗೂ ಹೊಸ ವರ್ಷದ ಪ್ರಯುಕ್ತ ವಿಶೇಷ ರೈಲು ಸಂಚಾರ…..!

ಕ್ರಿಸ್​ಮಸ್​ ಹಾಗೂ ಹೊಸ ವರ್ಷಾಚರಣೆಯ ಅವಧಿಯಲ್ಲಿ ರೈಲುಗಳಲ್ಲಿ ಜನದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಐಆರ್​ಸಿಟಿಸಿ ಕೇಂದ್ರ ರೈಲ್ವೆ ಇಲಾಖೆಯೊಂದಿಗೆ ಸೇರಿ ವಿಶೇಷ ರೈಲುಗಳನ್ನು ಓಡಿಸುವುದಾಗಿ ಘೋಷಣೆ ಮಾಡಿದೆ.

ಶುಕ್ರವಾರದಂದು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದ್ದು ಇಂದಿನಿಂದ ರೈಲುಗಳ ಬುಕ್ಕಿಂಗ್​ ಆರಂಭವಾಗಲಿದೆ ಎಂದು ಹೇಳಿದೆ.

ರೈಲು ಸಂಖ್ಯೆ 01596 ಮಡಂಗಾವ್​ – ಪನ್ವೆಲ್​ ವಿಶೇಷ ರೈಲು ನವೆಂಬರ್​ 21ರಿಂದ ಜನವರಿ 2ನೇ ತಾರೀಖಿನವರೆಗೆ ಪ್ರತಿ ಭಾನುವಾರ ಸಂಜೆ ನಾಲ್ಕು ಗಂಟೆಗೆ ಮಡಗಾಂವ್​​​ನಿಂದ ಹೊರಟು ಮಾರನೇ ದಿನ ಮುಂಜಾನೆ 3:15ಕ್ಕೆ ಪನ್ವೆಲ್​ ತಲುಪುತ್ತದೆ.

ರೈಲು ಸಂಖ್ಯೆ 01595 ಪನ್ವೆಲ್​ – ಮಡಗಾಂವ್​ ವಿಶೇಷ ರೈಲು ಪನ್ವೇಲ್​ನಿಂದ ಮುಂಜಾನೆ 06:05ಕ್ಕೆ ಹೊರಡಲಿದೆ. ನವೆಂಬರ್​ 22ರಿಂದ ಜನವರಿ 3ರವರೆಗೆ ಪ್ರತಿ ಸೋಮವಾರ ಹೊರಡುವ ಈ ರೈಲು ಅದೇ ದಿನ ಸಂಜೆ 06:45ಕ್ಕೆ ಮಡಗಾಂವ್​ ತಲುಪಲಿದೆ.

ಈ ರೈಲು ಕರ್ಮಾಲಿ, ಥಿವಿಮ್, ಸಾವಂತವಾಡಿ ರಸ್ತೆ, ಕುಡಾಲ್, ಸಿಂಧುದುರ್ಗ, ಕಂಕಾವಲಿ, ವೈಭವ್ವಾಡಿ ರಸ್ತೆ, ರಾಜಾಪುರ ರಸ್ತೆ, ಅದಾವಲಿ, ರತ್ನಗಿರಿ, ಸಂಗಮೇಶ್ವರ ರಸ್ತೆ, ಸವಾರ್ದಾ, ಚಿಪ್ಲುನ್, ಖೇಡ್, ಮಂಗಾವ್ ಮತ್ತು ರೋಹಾ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.

ಈ ರೈಲಿನ ವೇಳಾಪಟ್ಟಿಯ ಸಂಪೂರ್ಣ ಮಾಹಿತಿಗಾಗಿ www.enquiry.indianrail.gov.in ಭೇಟಿ ನೀಡಬೇಕು ಅಥವಾ NTES ಅಪ್ಲಿಕೇಶನ್​ ಡೌನ್​ಲೋಡ್​ ಮಾಡಬೇಕು. ಈ ರೈಲುಗಳಲ್ಲಿಯೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೋವಿಡ್​ ಮಾರ್ಗಸೂಚಿಗಳನ್ನು ಪಾಲನೆ ಮಾಡುವುದು ಕಡ್ಡಾಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...