alex Certify ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ: ಹೊಸ ವರ್ಷದಲ್ಲಿ 5ನೇ ಬಾರಿ ಚಿನ್ನದ ದರ ಭಾರಿ ಇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ: ಹೊಸ ವರ್ಷದಲ್ಲಿ 5ನೇ ಬಾರಿ ಚಿನ್ನದ ದರ ಭಾರಿ ಇಳಿಕೆ

ಬೆಂಗಳೂರು: ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಹೊಸ ವರ್ಷದಲ್ಲಿ ಸತತ ಐದನೇ ಬಾರಿಗೆ ಚಿನ್ನದ ದರ ಕಡಿಮೆಯಾಗಿದೆ.

10 ಗ್ರಾಂ ಚಿನ್ನದ ದರ 2024ರಲ್ಲಿ 1,140 ರೂ.ನಷ್ಟು ಇಳಿಕೆಯಾಗಿದೆ. 2024ರ ಜನವರಿ 1ರಿಂದ 10ರವರೆಗೆ 5 ಸಲ ಚಿನ್ನದ ದರ ಇಳಿಕೆಯಾಗಿದ್ದು, ಒಂದು ಬಾರಿಯೂ ಏರಿಕೆ ಕಂಡಿಲ್ಲ.

ಬೆಂಗಳೂರಿನಲ್ಲಿ ಜನವರಿ 10ರಂದು 22 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂ ಗೆ 5770 ರೂ., 24 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂ ಗೆ 6,295 ರೂ. ಇದೆ.

ಡಿಸೆಂಬರ್ 31ಕ್ಕೆ ಹೋಲಿಸಿದರೆ ಹೊಸ ವರ್ಷದಲ್ಲಿ 22 ಕ್ಯಾರೆಟ್ ಚಿನ್ನದ ದರ 59 ಸಾವಿರ ರೂ. ನಿಂದ ಪ್ರಸ್ತುತ 57,700 ರೂ.ಗೆ ಇಳಿಕೆಯಾಗಿದ್ದು, ಸುಮಾರು 1200 ರೂ. ವರೆಗೂ ಕಡಿಮೆಯಾಗಿದೆ. 24 ಕ್ಯಾರೆಟ್ ಚಿನ್ನದ ದರ 10 ಗ್ರಾಂ ಗೆ 64,000 ರೂ.ನಿಂದ 62,900 ರೂ.ಗೆ ಇಳಿಕೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...