alex Certify ಒಂದು ಕಾಲದಲ್ಲಿ 12ನೇ ತರಗತಿ ಫೇಲ್​, ಟೆಂಪೋ ಡ್ರೈವರ್​ ಕೆಲಸ…….ಈಗ ಮುಂಬೈ ಪೊಲೀಸ್​ ಹೆಚ್ಚುವರಿ ಆಯುಕ್ತ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಕಾಲದಲ್ಲಿ 12ನೇ ತರಗತಿ ಫೇಲ್​, ಟೆಂಪೋ ಡ್ರೈವರ್​ ಕೆಲಸ…….ಈಗ ಮುಂಬೈ ಪೊಲೀಸ್​ ಹೆಚ್ಚುವರಿ ಆಯುಕ್ತ..!

ಐಪಿಎಸ್​ ಅಧಿಕಾರಿಯಾಗಬೇಕು ಎಂಬ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಎಲ್ಲಾ ಸವಾಲುಗಳನ್ನು ಎದುರಿಸಿದ ಮನೋಜ್​ ಕುಮಾರ್​ ಶರ್ಮಾ ಇಂದು ಅನೇಕರಿಗೆ ಸ್ಪೂರ್ತಿ ಎನಿಸಿದ್ದಾರೆ, ಮಧ್ಯಪ್ರದೇಶ ಮೊರೇನಾದವರಾದ ಮನೋಜ್ ಶರ್ಮಾ ತಮ್ಮ ಯಶಸ್ಸಿನ ಹಾದಿಯ ನಡುವೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದಾರೆ.

12ನೆ ತರಗತಿಯಲ್ಲಿ ಅನುತ್ತೀರ್ಣರಾಗಿದ್ದು ಹಾಗೂ 9 ಮತ್ತು 10ನೇ ತರಗತಿಯಲ್ಲಿ ಮೂರನೇ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಿದ್ದ ಸಾಮಾನ್ಯ ವಿದ್ಯಾರ್ಥಿಯೊಬ್ಬ ತನ್ನ ಸಾಮರ್ಥ್ಯದ ಬಗ್ಗೆ ಎಂದಿಗೂ ಅನುಮಾನಪಟ್ಟುಕೊಳ್ಳದೇ ಅಂದುಕೊಂಡ ಗುರಿಯನ್ನು ಸಾಧಿಸಿಯೇಬಿಟ್ಟಿದ್ದಾರೆ.

ಗ್ವಾಲಿಯರ್​​ನಲ್ಲಿ ಟೆಂಪೋ ಡ್ರೈವರ್​ ಆಗಿ ಕೆಲಸ ಮಾಡುತ್ತಿದ್ದ ಮನೋಜ್​​ ಅದರ ಜೊತೆಯಲ್ಲಿ ಯುಪಿಎಸ್​ಸ್ಸಿ ಪರೀಕ್ಷೆಗೂ ತಯಾರಿ ನಡೆಸುತ್ತಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿಯಂತೂ ತೀರಾ ಕೆಳ ಹಂತದಲ್ಲಿತ್ತು. ಸರಿಯಾಗಿ ಒಂದು ಮನೆಯೂ ಇಲ್ಲದ ಬಡತನದ ನಡುವೆಯೂ ಮನೋಜ್​ ಅಂದುಕೊಂಡ ಗುರಿಯನ್ನು ಸಾಧಿಸಿದ್ದಾರೆ.

ದೆಹಲಿಯಲ್ಲಿ ಲೈಬ್ರರಿಯೊಂದರಲ್ಲಿ ಡಿ ದರ್ಜೆ ನೌಕರನಾಗಿದ್ದ ಮನೋಜ್​​ ಈ ವೇಳೆಯಲ್ಲಿ ಗೋರ್ಕಿ, ಲಿಂಕನ್​ ಹಾಗೂ ಮುಕ್ತಬೋಧ್​ರಂತಹ ಗಮನಾರ್ಹ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಓದಿದ್ದರಂತೆ. ಈ ಪುಸ್ತಕಗಳು ಮನೋಜ್​​ಗೆ ಜೀವನದ ವಾಸ್ತವದ ಬಗ್ಗೆ ಆಳವಾದ ತಿಳುವಳಿಕೆ ಮೂಡುವಂತೆ ಮಾಡಿತ್ತು.

ಆರಂಭಿಕ ವೈಫಲ್ಯಗಳಿಂದ ಹಿಂಜರಿಯದ ಮನೋಜ್​​ ಯುಪಿಎಸ್​ಸಿಯಲ್ಲಿ ನಾಲ್ಕು ಪ್ರಯತ್ನಗಳನ್ನು ಮಾಡಿದ್ದರು. ಮೊದಲ ಮೂರು ಪ್ರಯತ್ನದಲ್ಲಿ ನಿರಾಸೆ ಅನುಭವಿಸಿದ್ದ ಮನೋಜ್​ ತಮ್ಮ ನಾಲ್ಕನೇ ಪ್ರಯತ್ನದಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಅಖಿಲ ಭಾರತದ ಶ್ರೇಣಿಯಲ್ಲಿ 121ನೇ ರ್ಯಾಂಕ್​ ಪಡೆದುಕೊಂಡಿದ್ದಾರೆ. ಇಂದು ಮನೋಜ್​​​ ಮುಂಬೈ ಪೊಲೀಸ್​ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋಜ್​​ ಶರ್ಮಾ ತಮ್ಮ ದಕ್ಷ ಸೇವೆಯಿಂದ ಸಿಂಗಂ ಎಂಬ ಬಿರುದನ್ನೂ ಪಡೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...