alex Certify ಪಾಕ್‌ ಮಾಜಿ ಕ್ರಿಕೆಟಿಗ ಇಂಜಮಾಮ್​ ಉಲ್​ ಹಕ್​ಗೆ ಹೃದಯಾಘಾತ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್‌ ಮಾಜಿ ಕ್ರಿಕೆಟಿಗ ಇಂಜಮಾಮ್​ ಉಲ್​ ಹಕ್​ಗೆ ಹೃದಯಾಘಾತ…..!

ಪಾಕಿಸ್ತಾನ ಕ್ರಿಕೆಟ್​ನ ಮಾಜಿ ನಾಯಕ ಇಂಜಮಾಮ್​​​ ಉಲ್​ ಹಕ್​ಗೆ ಹೃದಯಾಘಾತವಾಗಿದ್ದು ಸೋಮವಾರ ಆಂಜಿಯೋಪ್ಲಾಸ್ಟ್​ ಸರ್ಜರಿಗೆ ಒಳಗಾಗಿದ್ದಾರೆ.

ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಆದರೆ ಅವರನ್ನು ನಿಗಾದಲ್ಲಿ ಇಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ. ಕಳೆದ ಮೂರು ದಿನಗಳಿಂದ ಇಂಜಮಾಮ್​ ಎದೆ ನೋವಿನಿಂದ ಬಳಲುತ್ತಿದ್ದರು. ಪ್ರಾಥಮಿಕ ಪರೀಕ್ಷೆಗಳಲ್ಲಿ ಇಂಜಮಾಮ್​ಗೆ ಯಾವುದೇ ತೊಂದರೆ ಇದ್ದದ್ದು ಕಂಡು ಬಂದಿರಲಿಲ್ಲ. ಆದರೆ ಸೋಮವಾರ ನಡೆಸಲಾದ ಪರೀಕ್ಷೆಯಲ್ಲಿ ಇಂಜಮಾಮ್​​ಗೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ.

ಕೂಡಲೇ ಇಂಜಮಾಮ್​ರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ. ಇಂಜಮಾಮ್​ ಆರೋಗ್ಯ ಸದ್ಯ ಸುಧಾರಿಸಿದೆ. ಆದರೆ ಅವರನ್ನು ನಿಗಾದಲ್ಲಿ ಇಡಲಾಗಿದೆ.
51 ವರ್ಷದ ಇಂಜಮಾಮ್​​ ಆಡಿರುವ 375 ಪಂದ್ಯಗಳಲ್ಲಿ 11,701 ರನ್​ಗಳನ್ನು ಗಳಿಸಿದ್ದಾರೆ. ಈ ಮೂಲಕ ಏಕದಿನ ಪಂದ್ಯದಲ್ಲಿ ಅತೀ ಹೆಚ್ಚು ರನ್​ ಗಳಿಸಿದ ಪಾಕಿಸ್ತಾನದ ಕ್ರಿಕೆಟಿಗ ಎಂಬ ಕೀರ್ತಿಯನ್ನು ಹೊಂದಿದ್ದಾರೆ.

ಯೂನಿಸ್‌ ಖಾನ್‌ ಹಾಗೂ ಜಾವೆದ್‌ ಮಿಯಾಂದದ್‌ ಬಳಿಕ ಟೆಸ್ಟ್​ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಮೂರನೇ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನೂ ಇಂಜಮಾಮ್‌ ಉಲ್‌ ಹಕ್‌(8829) ಹೊಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...