alex Certify ಪ್ರತಿ ದಿನ ಈ ಯೋಜನೆಯಲ್ಲಿ 200 ರೂ. ಹೂಡಿಕೆ ಮಾಡಿ ಗಳಿಸಿ 28 ಲಕ್ಷ ರೂಪಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿ ದಿನ ಈ ಯೋಜನೆಯಲ್ಲಿ 200 ರೂ. ಹೂಡಿಕೆ ಮಾಡಿ ಗಳಿಸಿ 28 ಲಕ್ಷ ರೂಪಾಯಿ

ಹಣ ಹೂಡಿಕೆ ಮಾಡುವುದು ಈಗ ಅತ್ಯಗತ್ಯವಾಗಿದೆ. ನಂಬಿಕಸ್ತ ಜಾಗದಲ್ಲಿ ಹೂಡಿಕೆ ಮಾಡ್ಬೇಕಾಗುತ್ತದೆ. ಅಪಾಯ ಕಡಿಮೆಯಿರುವ ಹೂಡಿಕೆಗಳಲ್ಲಿ ಎಲ್ಐಸಿ ಕೂಡ ಒಂದು. ಭಾರತೀಯ ಜೀವ ವಿಮಾ ನಿಗಮವು ಅಂತಹ ಒಂದು ವಿಶೇಷ ಯೋಜನೆಯನ್ನು ಪರಿಚಯಿಸಿದೆ. ಅದಕ್ಕೆ ಎಲ್ಐಸಿ ಜೀವನ್ ಪ್ರಗತಿ ಯೋಜನೆ ಎಂದು ಹೆಸರಿಸಲಾಗಿದೆ.  ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್‌ಗಳು ಮತ್ತು ಕ್ರಿಪ್ಟೋಕರೆನ್ಸಿಗಳು ಇತ್ಯಾದಿಗಳಲ್ಲಿ ಹೂಡಿಕೆ ಮಾಡಲು ಭಯಪಡುವ ಜನರಿಗೆ ಈ ಯೋಜನೆ ಬೆಸ್ಟ್ ಎನ್ನಬಹುದು.

ಎಲ್ಐಸಿಯ ಈ ಯೋಜನೆಯಲ್ಲಿ ದೀರ್ಘಾವಧಿಯವರೆಗೆ ಹೂಡಿಕೆ ಮಾಡುವ ಮೂಲಕ ನೀವು ಬಹಳಷ್ಟು ಹಣ ಗಳಿಸಬಹುದು. ಇದರಲ್ಲಿ ಪ್ರತಿದಿನ 200 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ನೀವು ಸತತ 20 ವರ್ಷಗಳವರೆಗೆ ಹಣವನ್ನು ಹೂಡಿಕೆ ಮಾಡಿದರೆ, ಮೆಚ್ಯೂರಿಟಿಯಲ್ಲಿ 28 ಲಕ್ಷ ರೂಪಾಯಿಗಳನ್ನು ಒಟ್ಟಿಗೆ ಪಡೆಯಬಹುದು.

ಎಲ್ಐಸಿಯ ಈ ಪ್ಲಾನ್ ನಲ್ಲಿ ಡೆತ್ ಬೆನಿಫಿಟ್ ಸೌಲಭ್ಯ ಕೂಡ ನಿಮಗೆ ಸಿಗಲಿದೆ. ನಿಯಮಿತವಾಗಿ ಪ್ರೀಮಿಯಂ ಅನ್ನು ಪಾವತಿಸಿದರೆ, ಈ ಯೋಜನೆಯಲ್ಲಿ ಡೆತ್ ಬೆನಿಫಿಟ್ ಸಿಗಲಿದೆ. ಐದು ವರ್ಷಗಳಿಗೊಮ್ಮೆ ಇದರ ಹಣ ಹೆಚ್ಚಾಗುತ್ತದೆ.

ಪಾಲಿಸಿ  ಖರೀದಿಸಿದ ಐದು ವರ್ಷಗಳ ನಂತರ ವಿಮೆ ಪಡೆದ ವ್ಯಕ್ತಿ ಸಾವನ್ನಪ್ಪಿದರೆ ಆತನ ನಾಮಿನಿಗೆ ಮೂಲ ವಿಮೆ ಮೊತ್ತದ ಶೇಕಡಾ 100 ರಷ್ಟು ಹಣ ಸಿಗಲಿದೆ. 6-10 ವರ್ಷಗಳಲ್ಲಿ ಮರಣಹೊಂದಿದರೆ  ನಾಮಿನಿಯು ವಿಮಾ ಮೊತ್ತದ ಶೇಕಡಾ 125ರಷ್ಟು ಹಣ ಪಡೆಯುತ್ತಾನೆ. 11-15 ವರ್ಷಗಳಲ್ಲಿ ಮರಣ ಹೊಂದಿದರೆ, ವಿಮಾ ಮೊತ್ತದ ಶೇಕಡಾ 150ರಷ್ಟು ಹಾಗೂ 16-20 ವರ್ಷಗಳಲ್ಲಿ ಮರಣಹೊಂದಿದರೆ, ವಿಮಾ ಮೊತ್ತದ ಶೇಕಡಾ 200ರಷ್ಟು ಹಣ ಸಿಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...