alex Certify ಮಹಿಳೆಯರ ಮೇಲೆ ʼಲಾಕ್‌ ಡೌನ್ʼ‌ ಬೀರಿದೆ ಈ ಪರಿಣಾಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರ ಮೇಲೆ ʼಲಾಕ್‌ ಡೌನ್ʼ‌ ಬೀರಿದೆ ಈ ಪರಿಣಾಮ

ಕೊರೊನಾ ಸಂಕಷ್ಟದಿಂದ ಉಂಟಾದ ಲಾಕ್​ಡೌನ್​ನಿಂದಾಗಿ ಈ ವರ್ಷ ಜನತೆ ಸಂಪೂರ್ಣ ವಿಭಿನ್ನವಾದ ಜೀವನಶೈಲಿಯನ್ನ ರೂಢಿಸಿಕೊಂಡಿದ್ದಾರೆ. ಆದರೆ ಲಾಕ್​ಡೌನ್​ನ ಎಫೆಕ್ಟ್ ಪುರುಷ ಹಾಗೂ ಮಹಿಳೆಯರ ಮನೋಭಾವನೆಯ ಮೇಲೆ ವಿಭಿನ್ನ ಪರಿಣಾಮ ಬೀರಿದೆ.

ಕೆನಡಾದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಲಾಕ್​ಡೌನ್​ ಸಮಯದಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರು ಖಿನ್ನತೆ ಹಾಗೂ ಆತಂಕಕ್ಕೆ ಒಳಗಾಗಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.

ಕ್ಯಾಲ್ಗರಿ ವಿಶ್ವವಿದ್ಯಾಲಯದ ಸಂಶೋಧಕರು ಹ್ಯಾಚ್​ಕಿಸ್​ ಬ್ರೇನ್​ ಇನ್ಸ್​ಟಿಟ್ಯೂಟ್​ನ ಸಹಯೋಗದೊಂದಿಗೆ ಲಾಕ್​ಡೌನ್​ ಅವಧಿಯಲ್ಲಿ ಪುರುಷರು ಹಾಗೂ ಮಹಿಳೆಯರ ನಿದ್ರೆ ಪ್ರಮಾಣ, ಮಾನಸಿಕ ಸ್ಥಿತಿಗಳನ್ನ ಅಧ್ಯಯನ ಮಾಡಿದ್ರು. ಕೆನಡಾದ 112 ಪುರುಷರು ಹಾಗೂ 459 ಮಹಿಳೆಯರ ಮೇಲೆ ಆನ್​ಲೈನ್​ ಸಮೀಕ್ಷೆ ನಡೆಸುವ ಮೂಲಕ ಈ ಅಧ್ಯಯನವನ್ನ ಕೈಗೊಳ್ಳಲಾಯ್ತು.

ಲಾಕ್​​ಡೌನ್​ ಸಮಯದಲ್ಲಿ 39 ಪ್ರತಿಶತಕ್ಕಿಂತ ಹೆಚ್ಚಿನ ಮಹಿಳೆಯರು ನಿದ್ರಾಹೀನತೆ ಸಮಸ್ಯೆಗೆ ಸಿಲುಕಿದ್ದಾರೆ. ಕೇವಲ ನಿದ್ರಾಹೀನತೆ ಮಾತ್ರವಲ್ಲದೇ ಖಿನ್ನತೆ ಹಾಗೂ ಆತಂಕಕ್ಕೆ ಸಂಬಂಧಿಸಿದ ಲಕ್ಷಣಗಳೂ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...