alex Certify ಓಪನ್ ಆದ ಚಿಪ್ಸ್ ಪ್ಯಾಕೆಟ್ ಅನ್ನು ಮತ್ತೆ ಸೀಲ್ ಮಾಡಿಡೋದು ಹೇಗೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓಪನ್ ಆದ ಚಿಪ್ಸ್ ಪ್ಯಾಕೆಟ್ ಅನ್ನು ಮತ್ತೆ ಸೀಲ್ ಮಾಡಿಡೋದು ಹೇಗೆ ಗೊತ್ತಾ…?

ಸಾಮಾನ್ಯವಾಗಿ ಪೊಟ್ಟಣದಲ್ಲಿನ ಆಹಾರವನ್ನು ಒಮ್ಮೆ ಕೆಲಭಾಗ ಬಳಸಿ ಅದನ್ನು ಪುನಹ ಅದೇ ಕವರ್ ನಲ್ಲಿ ಸೀಲ್ ಮಾಡುವುದು ಒಂದು ತಲೆಬಿಸಿ ಕೆಲಸ. ಆದರೆ ಮಹಿಳೆಯೊಬ್ಬರು ಅರ್ಧ ಖಾಲಿ ಮಾಡಿದ ಚಿಪ್ಸ್ ಪ್ಯಾಕೆಟನ್ನು ಪುನಃ ಸೀಲ್ ಮಾಡುವ ಸರಳ ವಿಧಾನವನ್ನು ತೋರಿಸಿ ಕೊಟ್ಟಿದ್ದಾರೆ.

ಒಮ್ಮೆ ತೆರೆದ ಪ್ಯಾಕೆಟನ್ನು ಪುನಃ ಸೀಲ್ ಮಾಡಲು ಕ್ಲಿಪ್, ರಬ್ಬರ್ ಬ್ಯಾಂಡ್, ಟೇಪ್ ಹೀಗೆ ವಿವಿಧ ಸಾಧನ ಬಳಸಬೇಕಾಗುತ್ತದೆ. ಆದರೆ ಈ ಮಹಿಳೆ ಯಾವುದೇ ಸಾಧನವಿಲ್ಲದೇ ಮಡಚುವ ವಿಧಾನದ ಮೂಲಕ‌ ಸೀಲ್ ಮಾಡಿಡುತ್ತಾರೆ. ಆ ವಿಧಾನವನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ.

ಕವರ್ ನ ಮೇಲ್ಭಾಗವನ್ನು ತ್ರಿಕೋನಾಕಾರದಲ್ಲಿ ಎರಡು ಮೂರು ಮಡಿಕೆ ಮೂಲಕ ಸೀಲ್ ಮಾಡಿದರೆ ಅದರೊಳಗಿರುವ ಚಿಪ್ಸ್ ಹೊರಗೆ ಬೀಳುವುದಿಲ್ಲ ಎಂಬುದರ ಪ್ರಾತ್ಯಕ್ಷಿಕೆ ತೋರಿಸಿದ್ದಾರೆ.

ಮಡಿಸುವ ವಿಧಾನವು ಎಷ್ಟು ಪರಿಣಾಮಕಾರಿ ಎಂದು ಸಾಬೀತುಪಡಿಸಲು ಆಕೆಯೂ ಪ್ಯಾಕೆಟನ್ನು ತಲೆಕೆಳಗಾಗಿ ತಿರುಗಿಸಿ ಮುರುಗಿಸಿ ತೋರಿಸುತ್ತಾರೆ. ಹೀಗೆ ಮಾಡಿದಾಗಲೂ ಚಿಪ್ಸ್ ಹೊರಗೆ ಬರುವುದಿಲ್ಲ. ನಿರೀಕ್ಷಿಸಿದಂತೆ ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ.

Apparently we have been closing the chip bags wrong

Posted by Michelle O'Brien on Friday, April 24, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...