alex Certify ಮುದ್ದಿನ ನಾಯಿ ಮರಿ ರಕ್ಷಿಸಲು ಹೆಬ್ಬಾವಿನ ಜೊತೆ ಸೆಣಸಾಡಿದ ಯಜಮಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುದ್ದಿನ ನಾಯಿ ಮರಿ ರಕ್ಷಿಸಲು ಹೆಬ್ಬಾವಿನ ಜೊತೆ ಸೆಣಸಾಡಿದ ಯಜಮಾನಿ

ಒಂಬತ್ತು ವಾರಗಳ ತನ್ನ ಮುದ್ದಿನ ಸಾಕು ನಾಯಿಯನ್ನು ಹೆಬ್ಬಾವಿನಿಂದ ರಕ್ಷಿಸಲು ಮುಂದಾದ ಅದರ ಯಜಮಾನಿ ಇದಕ್ಕಾಗಿ ಹೆಬ್ಬಾವಿನೊಂದಿಗೆ ಭಾರೀ ಕಾಳಗವನ್ನೇ ಮಾಡಿದ್ದಾರೆ.

ಕಾರ್ಪೆಟ್ ಹೆಬ್ಬಾವೊಂದು ತನ್ನ ನಾಯಿಮರಿಯನ್ನು ಸುತ್ತಿಕೊಂಡು, ಅದಕ್ಕೆ ಉಸಿರುಗಟ್ಟಿಸಿ ಸಾಯಿಸಲು ಮುಂದಾಗಿದ್ದನ್ನು ಕಂಡ ಕೂಡಲೇ ಬರಿಗೈಯಲ್ಲೇ ಹೋರಾಟಕ್ಕೆ ಇಳಿದಿದ್ದಾರೆ ಮೇಕೆಲ್ಲೆ ವಾನ್ ಶೌವೆನ್.

ಪೊದೆಯೊಂದರಿಂದ ಹೊರಬಂದ ಹೆಬ್ಬಾವು ಜಾಸ್ಪರ್‌ ಹೆಸರಿನ ಈ ನಾಯಿಮರಿಯನ್ನು ಸುತ್ತಿಕೊಳ್ಳಲು ಆರಂಭಿಸುತ್ತಿರುವ ದೃಶ್ಯಾವಳಿಯನ್ನು ವಿಡಿಯೋ ಕ್ಲಿಪ್‌ನಲ್ಲಿ ನೋಡಬಹುದಾಗಿದೆ.

ಆಸ್ಟ್ರೇಲಿಯಾದ ಕ್ವೀನ್ಸ್‌ಲೆಂಡ್‌ನ ಸನ್‌ಶೈನ್ ಕಡಲ ತೀರದಲ್ಲಿ ನಡೆದ ಈ ಘಟನೆಯಲ್ಲಿ, ನಾಯಿಮರಿಗೆ ಉಸಿರುಗಟ್ಟುತ್ತಿರುವುದನ್ನು ಕಂಡಕೂಡಲೇ ಕೈಯಲ್ಲಿದ್ದ ಕ್ರಿಸ್‌ಮನ್ ಪೇಪರ್‌ನಲ್ಲಿ ಹೆಬ್ಬಾವಿಗೆ ಹೊಡೆದ ಮೈಕೆಲ್ಲೆ, ತಮ್ಮ ಬರಿಗೈನಿಂದಲೇ ನಾಯಿಯನ್ನು ಬಿಡುಗಡೆಗೊಳಿಸಿದ್ದಾರೆ. ನಾಯಿಮರಿ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...