alex Certify ಭಾವುಕರನ್ನಾಗಿಸುತ್ತೆ ತಾಯಿ – ಮಗಳ ಅಪ್ಪುಗೆಯ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾವುಕರನ್ನಾಗಿಸುತ್ತೆ ತಾಯಿ – ಮಗಳ ಅಪ್ಪುಗೆಯ ಈ ವಿಡಿಯೋ

ಕೊರೋನಾ ಸಾಂಕ್ರಾಮಿಕ ಸೋಂಕು ವಿಶ್ವದಾದ್ಯಂತ ಹರಡುತ್ತಿದ್ದು ಹೀಗಾಗಿ ಜನರು ಮನೆಯಲ್ಲಿಯೇ ಉಳಿಯುವಂತೆ ಹೇಳಲಾಗುತ್ತಿದೆ. ಯಾರನ್ನಾದರೂ ಭೇಟಿಯಾದರೂ ಸಹ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾದ ಕಾರಣ ದೂರದಿಂದಲೇ ವಿಶ್ ಮಾಡಬೇಕಾಗಿದೆ.

ವಿಶ್ವದ ಅನೇಕ ದೇಶಗಳಲ್ಲಿ ವೃದ್ಧರು ನರ್ಸಿಂಗ್ ಹೋಮ್ ಅಥವಾ ವೃದ್ಧಾಶ್ರಮದಲ್ಲಿ ಇದ್ದಾರೆ, ಅವರನ್ನು ನಿರಂತರವಾಗಿ ಭೇಟಿ ಮಾಡಲು ಕುಟುಂಬದ ಇತರ ಸದಸ್ಯರಿಗೆ ಸಾಧ್ಯವಾಗುತ್ತಿಲ್ಲ. ಈ ನಡುವೆ ಭೇಟಿ ಸಂದರ್ಭದಲ್ಲಿ ವೃದ್ಧರಿಗೆ ಅಚ್ಚರಿಗಳನ್ನೂ ನೀಡುತ್ತಿದ್ದಾರೆ.

ಇದೀಗ ಯುಎಸ್ ನ ವರ್ಜೀನಿಯಾದ ವಿಡಿಯೋವೊಂದು ವೈರಲ್ ಆಗಿದ್ದು, ಮಗಳೊಬ್ಬಳು ನರ್ಸಿಂಗ್ ಹೋಮ್ ನಲ್ಲಿದ್ದ ತನ್ನ ತಾಯಿಯ ಭೇಟಿಗೆ ತೆರಳುವಾಗ ಹಿಪ್ಪೋ ವೇಷಭೂಷಣ ಧರಿಸಿ ನರ್ಸಿಂಗ್ ಹೋಂ ತಲುಪಿದ್ದಳು.

ತಾಯಿ ಹೊರಬರುತ್ತಿದ್ದಂತೆ ಮಗಳು ಆಕೆಯನ್ನು ಕರೆದು ಅಪ್ಪಿಕೊಳ್ಳುವ ನವಿರಾದ ಸಂದರ್ಭ ಅಂತರ್ಜಾಲದಲ್ಲಿ ಅವರನ್ನು ಬೆಚ್ಚಗಾಗಿಸಿದೆ. ನೆಟ್ಟಿಗರು ಬಗೆ ಬಗೆಯಾಗಿ ಭಾವನೆ ವ್ಯಕ್ತಪಡಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...