alex Certify ಗರ್ಭಿಣಿ ಎಂಬುದನ್ನೇ ಅರಿಯದ ಮಹಿಳೆಯಿಂದ ಅವಳಿ ಮಕ್ಕಳಿಗೆ ಜನ್ಮ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿ ಎಂಬುದನ್ನೇ ಅರಿಯದ ಮಹಿಳೆಯಿಂದ ಅವಳಿ ಮಕ್ಕಳಿಗೆ ಜನ್ಮ…!

ತಾನು ಗರ್ಭಿಣಿ ಎಂಬುದರ ಬಗ್ಗೆ ಅರಿವೇ ಇಲ್ಲದ ಮಹಿಳೆಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ ವಿಚಿತ್ರ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಅನ್ನಿ ತುಪೌ ಎಂಬವರು ತಾನು ಆರು ತಿಂಗಳ ಗರ್ಭಿಣಿ ಎಂದು ತಿಳಿದ ಕೂಡಲೇ ಶಾಕ್​ ಆಗಿದ್ದಾರೆ. ಇದಾಗಿ ಒಂದೂವರೆ ವಾರದ ಬಳಿಕ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ತಮ್ಮ ಈ ವಿಚಿತ್ರ ಕಥೆಯನ್ನ ಅನ್ನಿ ಫೇಸ್​ಬುಕ್​ನಲ್ಲಿ ಶೇರ್​ ಮಾಡಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಒಳಗಾದ ವೇಳೆ ವೈದ್ಯರು ನೀವು ಆರು ತಿಂಗಳ ಗರ್ಭಿಣಿ ಎಂದು ಹೇಳಿದ್ದಾರೆ.

ಮಾನಸಿಕ ಒತ್ತಡ ಹೆಚ್ಚಾದಂತೆ ಈ ಮಹಿಳೆ ಕೈ ಬೆರಳು ಹೀಗಾಗುತ್ತಂತೆ….!

ಅನ್ನಿಗೆ ಎಂದಿಗೂ ತಲೆ ತಿರುಗುವಿಕೆಯಂತಹ ಕಷ್ಟ ಉಂಟಾಗಿರಲಿಲ್ಲ. ಕೆಲವೊಮ್ಮೆ ಆಯಾಸವಾದಂತೆ ಎನಿಸುತ್ತಿತ್ತು. ಅಲ್ಲದೆ ನನ್ನ ಹೊಟ್ಟೆ ಕೂಡಾ ತುಂಬಾ ಮುಂದೆ ಬಂದಿರಲಿಲ್ಲ ಎಂದು ಅನ್ನಿ ಹೇಳಿದ್ದಾರೆ. ಏಪ್ರಿಲ್​ 25ರಂದು ಮುಂಜಾನೆ 3 ಗಂಟೆ ಸುಮಾರಿಗೆ ಅನ್ನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಅವರು ಮೊದಲು ಇದು ಹೆರಿಗೆ ನೋವಲ್ಲ ಎಂದು ಭಾವಿಸಿದ್ದರು. ಇದಾದ ಬಳಿಕ ಅವರು 2 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...