alex Certify ನೆಟ್ಟಿಗರ ಹುಬ್ಬೇರಿಸಿದ ಮಹಿಳೆಯ ವಿಶ್ವ ದಾಖಲೆಯ ಸಾಧನೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಹುಬ್ಬೇರಿಸಿದ ಮಹಿಳೆಯ ವಿಶ್ವ ದಾಖಲೆಯ ಸಾಧನೆ..!

ಬ್ರಿಟನಿ ವಾಲ್ಶ್​​ ಎಂಬ ಹೆಸರಿನ ಮಹಿಳೆ ಬಹಳ ವಿಶೇಷವಾಗಿ ವಿಶ್ವ ದಾಖಲೆ ನಿರ್ಮಿಸುವ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ. ತಮ್ಮ ಪಾದಗಳ ಬಲದಿಂದ ಈಕೆ ವಿಶ್ವ ದಾಖಲೆಯ ಗೌರವಕ್ಕೆ ಭಾಜನರಾಗಿದ್ದಾರೆ. ಉಲ್ಟಾ ನಿಂತು ತಮ್ಮ ಪಾದಗಳ ಸಹಾಯದಿಂದ ಬಾಣ ಬಿಡುವ ಮೂಲಕ ಸಾಧನೆ ಮಾಡಿದ್ದಾರೆ.

ಗಿನ್ನೆಸ್​ ವಿಶ್ವ ದಾಖಲೆಯ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಈ ಸಾಧನೆಯನ್ನ ಪೋಸ್ಟ್ ಮಾಡಲಾಗಿದೆ. ಬ್ರಿಟನಿ ವಾಲ್ಶ್​ ತಮ್ಮ ಪಾದಗಳ ಸಹಾಯದಿಂದ 12.31 ಮೀಟರ್​ ಉದ್ದಕ್ಕೆ ಬಾಣ ಚಲಾಯಿಸಿದ್ದಾರೆ ಎಂದು ಶೀರ್ಷಿಕೆ ನೀಡಲಾಗಿದೆ.

ವಾಲ್ಶ್​​ ಸರ್ಕಸ್​​​ ಹಾಗೂ ಥಿಯೇಟರ್​ನಲ್ಲಿ ಪ್ರದರ್ಶನ ನೀಡ್ತಾರೆ. ಇವರ ಎರೋಬಿಕ್​ ಸ್ಕಿಲ್​ಗಳು ಇಂದು ವಿಶ್ವ ದಾಖಲೆಯ ಗರಿಯನ್ನ ನೀಡೋಕೆ ಸಹಾಯ ಮಾಡಿದೆ. ಇನ್​ಸ್ಟಾಗ್ರಾಂನಲ್ಲಿ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್​ ಆಗಿದ್ದು ಮಹಿಳೆಯ ಸಾಧನೆಯನ್ನ ಕೊಂಡಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...