alex Certify ಬಿಯರ್​ ಬಾಟಲಿಗಾಗಿ ಜೀವವನ್ನೇ ಪಣಕ್ಕಿಟ್ಟ ಮದ್ಯಪ್ರಿಯೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಯರ್​ ಬಾಟಲಿಗಾಗಿ ಜೀವವನ್ನೇ ಪಣಕ್ಕಿಟ್ಟ ಮದ್ಯಪ್ರಿಯೆ…!

ಬಿಯರ್​ ಬಾಟಲಿಗಳನ್ನ ನೀವು ಎಷ್ಟು ಪ್ರೀತಿ ಮಾಡುತ್ತೀರಿ..? ಬಿಯರ್​ ಪಾನೀಯಕ್ಕಾಗಿ ನಿಮ್ಮ ಪ್ರಾಣಕ್ಕೆ ಸಂಚಕಾರ ತೆಗೆದುಕೊಳ್ಳಲು ನೀವು ತಯಾರಿದ್ದೀರಾ..? ಇಲ್ಲ ಅನ್ನೋದು ನಿಮ್ಮ ಉತ್ತರವಾದರೆ ಈ ಸ್ಟೋರಿಯನ್ನ ನೀವು ಓದಲೇಬೇಕು.

ಆಸ್ಟ್ರೇಲಿಯಾದ ಮಹಿಳೆಯೊಬ್ಬರು ತಮ್ಮ ಬಿಯರ್​ ಬಾಟಲಿಗಳನ್ನ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಪ್ರವಾಹದ ನೀರಿಗೆ ಧುಮುಕಿದ್ದಾರೆ. ಕ್ವೀನ್​ ಲ್ಯಾಂಡ್ಸ್ ಹಾಗೂ ಉತ್ತರ ನ್ಯೂ ಸೌತ್​ ವೇಲ್ಸ್​ನ ಹಲವು ಭಾಗಗಳಲ್ಲಿ ಕಳೆದ ವಾರ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಈ ಮಳೆಯು ಆಸ್ಟ್ರೇಲಿಯಾದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟು ಮಾಡಿತ್ತು.

ಪ್ರವಾಹದಿಂದ ತಮ್ಮ ಮನೆ ಮಠಗಳನ್ನ ಉಳಿಸಿಕೊಳ್ಳೋಕೆ ಅನೇಕರು ಹೆಣಗಾಡುತ್ತಿದ್ದರೆ ಒಬ್ಬ ಮಹಿಳೆ ಮಾತ್ರ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬಿಯರ್​ ಬಾಟಲಿಗಾಗಿ ಜೀವವನ್ನೇ ಪಣಕ್ಕಿಟ್ಟಿದ್ದಾಳೆ. ಮೊಣಕಾಲಿನವರೆಗೆ ನೀರು ಬರುತ್ತಿದ್ದರೂ ಅಂಜದ ಮಹಿಳೆ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಬಿಯರ್​ ಕೇಸ್​​ಗಳನ್ನ ತೆಗೆದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...