alex Certify ತಂದೆಯ ವಂಶೋದ್ಧಾರ ಮಾಡಲು ಅಂಡಾಣು ದಾನಕ್ಕೆ ಮುಂದಾದ ಪುತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆಯ ವಂಶೋದ್ಧಾರ ಮಾಡಲು ಅಂಡಾಣು ದಾನಕ್ಕೆ ಮುಂದಾದ ಪುತ್ರಿ

নিজের ডিম্বাণু দিয়ে পিতৃত্বের স্বাদ দিলেন বাবা ও প্রাক্তন বয়ফ্রেন্ডকে!।Woman  offers to donate her eggs to help her father & ex-boyfriend have a babyಮ್ಯಾಂಚೆಸ್ಟರ್​ನ 21 ವರ್ಷದ ಯುವತಿಯೊಬ್ಬಳು ತನ್ನ ತಂದೆ ಹಾಗೂ ಮಾಜಿ ಗೆಳೆಯನಿಗೆ ಮಗುವನ್ನ ಹೊಂದಲು ನೆರವಾಗುವ ಸಲುವಾಗಿ ತನ್ನ ಅಂಡಾಣುಗಳನ್ನ ದಾನ ಮಾಡಲು ನಿರ್ಧರಿಸಿದ್ದಾಳೆ.

ಸ್ಯಾಫ್ರೋನ್​ ಎಂಬಾಕೆಯ ತಂದೆ ಬ್ಯಾರಿ ಡ್ರೆವಿಟ್​ ಬಾರ್ಲೋ ಬ್ರಿಟನ್​ನ ಸಲಿಂಗಕಾಮಿ ತಂದೆಗಳಲ್ಲಿ ಇವರೂ ಒಬ್ಬರು. ಸ್ಯಾಫ್ರೋನ್​ಳ ಮಾಜಿ ಸಂಗಾತಿ ಸ್ಕಾಟ್​ ಎಂಬಾತ ದ್ವಿಲಿಂಗಿಯಾದ ಕಾರಣ ಬ್ಯಾರಿ ಹಾಗೂ ಸ್ಕಾಟ್​ ಬಾಡಿಗೆ ತಾಯಿ ಮೂಲಕ ಸೆಪ್ಟೆಂಬರ್​ ತಿಂಗಳಲ್ಲಿ ಮೊದಲ ಹೆಣ್ಣು ಮಗುವನ್ನ ಪಡೆದಿದ್ದಾರೆ.

ತಮ್ಮ ಮೊದಲ ಮಗುವಿನೊಂದಿಗೆ ಮ್ಯಾಂಜೆಸ್ಟರ್​​ನಲ್ಲಿ ಸ್ಕಾಟ್​ ಹಾಗೂ ಬ್ಯಾರಿ ವಾಸಿಸುತ್ತಿದ್ದಾರೆ. ಸ್ಯಾಫ್ರೋನ್​​ ಇವರಿಬ್ಬರಿಗೆ ತನ್ನ ಅಂಡಾಣುಗಳನ್ನ ದಾನ ಮಾಡಲು ಒಪ್ಪಿಗೆ ನೀಡಿದ ಬಳಿಕ ಇದೀಗ ಈ ಸಲಿಂಗ ಕಾಮಿಗಳು ಎರಡನೇ ಮಗುವನ್ನ ಪಡೆಯಲು ಉತ್ಸುಕರಾಗಿದ್ದಾರೆ.

ಈ ವಿಚಾರ ನಿಮಗೆ ತೀರಾ ಗೊಂದಲ ಎನಿಸಬಹುದು. ಈ ಹಿಂದೆ ಟೋನಿಯೊಂದಿಗೆ ಸಂಬಂದ ಹೊಂದಿದ್ದ ಸಲಿಂಗಕಾಮಿ ಬ್ಯಾರಿ ಸ್ಯಾಫ್ರೋನ್​​ಳನ್ನ ಬಾಡಿಗೆ ತಾಯಿಯಿಂದ ಪಡೆದಿದ್ದರು. ಇದೀಗ ತನ್ನ ಮಗಳ ಮಾಜಿ ಪ್ರಿಯತಮ ಸ್ಕಾಟ್​​ನೊಂದಿಗೆ ಸಂಬಂಧ ಹೊಂದಿರುವ ಬ್ಯಾರಿ ಈಗಾಗಲೇ ಒಂದು ಮಗುವನ್ನ ಪಡೆದಿದ್ದಾರೆ. ​​ಇದೀಗ ಮಗಳ ಅಂಡಾಣು ಸಹಾಯದಿಂದಲೇ ಇನ್ನೊಂದು ಮಗುವನ್ನ ಹೊಂದೋಕೆ ಬ್ಯಾರಿ ತಯಾರಿ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...