alex Certify ಗೋಡೆಯೊಳಗೆ ಅಡಗಿತ್ತು 33 ವರ್ಷದ ಹಿಂದಿನ ನೆನಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋಡೆಯೊಳಗೆ ಅಡಗಿತ್ತು 33 ವರ್ಷದ ಹಿಂದಿನ ನೆನಪು

ಮೂವತ್ತಮೂರು ವರ್ಷಗಳ ಹಿಂದೆ ಗೋಡೆಯೊಳಗೆ ಅಡಗಿಸಿಟ್ಟಿದ್ದ ನೆನಪಿನೋಲೆಯೊಂದು ಹೊರಬಂದು, ಮನೆಯವರನ್ನೆಲ್ಲ ಭಾವುಕರಾಗುವಂತೆ ಮಾಡಿದ ಕಥೆಯಿದು.

ಮೂರು ದಶಕಗಳ ಹಿಂದೆ ಮಕ್ಕಳು ಹುಟ್ಟಿದ ದಿನವನ್ನು ದಾಖಲಿಸುವ ನೆನಪಿಡುವ ಅಥವಾ ದಾಖಲಿಸುವ ಕ್ರಮ ಅಷ್ಟಕ್ಕಷ್ಟೇ ಎನ್ನುವಂತಿತ್ತು.

ಎರಡು ವರ್ಷದ ಹಿಂದಷ್ಟೇ ತೀರಿ ಹೋದ ಆ್ಯಂಡ್ರ್ಯು ಕೋಲ್ಬೆಕ್, 1987 ರಲ್ಲಿ ಬರೆದಿಟ್ಟಿದ್ದ ಕೆಲ ಕಾಗದದ ಚೂರುಗಳು ಮನೆಯ ಗೋಡೆಯ ಅಲ್ಲಲ್ಲಿ ಪತ್ತೆಯಾಗಿವೆ.

ಈ ಪತ್ರವನ್ನ ಬರೆದಿದ್ದು 28/9/1987 ರಂದು. ಆ್ಯಂಡ್ರ್ಯು ಕೊಲ್ಬೆಕ್ 12 ವರ್ಷದವ. ಕ್ರಿಸ್ಟೋಫರ್ ಕೊಲ್ಬೆಕ್ 8 ವರ್ಷ, ಕಿಂಬರ್ಲಿ ಕೊಲ್ಬೆಕ್ 3 ವರ್ಷ‌ ಎಂಬ ಮಾಹಿತಿಯು ಪತ್ರದಲ್ಲಿದೆ. ಅಣ್ಣನ ಈ ಕೈಬರಹ ಕಂಡ ಕಿಂಬರ್ಲಿ ಕೊಲ್ಬೆಕ್ ಬಿಕ್ಕಿ ಬಿಕ್ಕಿ ಅತ್ತರು. ಹಳೆಯ ನೆನಪುಗಳ ಬುತ್ತಿ ಬಿಚ್ಚಿಕೊಂಡಿತು. ಅಷ್ಟು ಚಿಕ್ಕಂದಿನಲ್ಲೇ ಅಣ್ಣನಿಗಿದ್ದ ಬುದ್ಧಿವಂತಿಕೆ ಬಗ್ಗೆ ಹೆಮ್ಮೆ ಎನಿಸಿತು.

2013 ರ ನಂತರ ಕೊಲ್ಬೆಕ್ ಕುಟುಂಬ ಆ ಮನೆ ಬಿಟ್ಟು ಬೇರೆಡೆ ವಾಸವಿತ್ತು. ಹತ್ತಿರದ ಸಂಬಂಧಿಕರೇ ಅಲ್ಲಿ ವಾಸವಿದ್ದರು. ಮನೆಯ ನವೀಕರಣಕ್ಕೆಂದು ಗೋಡೆ ಒಡೆದು ಬೀಳಿಸಿದಾಗ ಪತ್ರ ಸಿಕ್ಕಿದೆ. ಇದನ್ನ ಬರೆದದ್ದು ಆ್ಯಂಡ್ರ್ಯು ಕೊಲ್ಬೆಕ್ ಆದರೂ ಗೋಡೆಯೊಳಗೆ ಹುದುಗಿಸಿಟ್ಟಿದ್ದು ತಂದೆ. ವಯೊಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿರುವ ತಂದೆಗೆ, ಈ ಕಾಗದಗಳನ್ನು ತೋರಿಸಿ ಕಿಂಬರ್ಲಿ ಖುಷಿ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...