alex Certify ಈಕೆ ತನ್ನ ಪತಿಗೆ ಬೇಬಿ ಎಂದು ಕರೆಯೋದ್ರ ಹಿಂದಿನ ಕಾರಣ ಕೇಳಿದ್ರೆ ನಕ್ಕು ಬಿಡ್ತೀರಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈಕೆ ತನ್ನ ಪತಿಗೆ ಬೇಬಿ ಎಂದು ಕರೆಯೋದ್ರ ಹಿಂದಿನ ಕಾರಣ ಕೇಳಿದ್ರೆ ನಕ್ಕು ಬಿಡ್ತೀರಿ…..!

ಕೆಲವೊಬ್ಬರ ಹೆಸರು ಎಷ್ಟು ವಿಚಿತ್ರವಾಗಿ ಇರುತ್ತೆ ಅಂದರೆ ಅದನ್ನ ಹೇಗೆ ಉಚ್ಛಾರ ಮಾಡೋದು ಅಂತಾನೇ ಅರ್ಥವಾಗೋದಿಲ್ಲ. ಅದರಲ್ಲೂ ಆ ವ್ಯಕ್ತಿಯ ಹೆಸರು ಬೇರೆ ಭಾಷೆಯಲ್ಲಿದ್ದರಂತೂ ಈ ಸಮಸ್ಯೆ ಇನ್ನೂ ಹೆಚ್ಚು.

ಇಂತಹದ್ದೇ ಒಂದು ಪ್ರಕರಣದಲ್ಲಿ ಮದುವೆಯಾದ ಅನೇಕ ವರ್ಷಗಳ ಬಳಿಕವೂ ಪತಿಯ ಹೆಸರನ್ನ ಹೇಗೆ ಉಚ್ಛರಿಸಬೇಕು ಎಂದು ತಿಳಿಯದ ಮಹಿಳೆ ಪತಿಯನ್ನ ಬೇಬಿ ಎಂದು ಕರೆಯುತ್ತಾ ಬಂದಿದ್ದಾಳೆ.

ಟಿಕ್​ಟಾಕ್​​ನಲ್ಲಿ ಮಹಿಳೆ ಈ ವಿಚಾರವನ್ನ ಬಹಿರಂಗ ಮಾಡಿದ್ದು ಪತಿಯ ಹೆಸರು ಹೇಗೆ ಉಚ್ಛಾರ ಮಾಡಬೇಕು ಎಂದು ಅರ್ಥವಾಗದ ಹಿನ್ನೆಲೆ ನಾನು ಕಳೆದ ಮೂರು ವರ್ಷಗಳಿಂದ ಬೇಬಿ ಎಂದೇ ಕರೆಯುತ್ತಿದ್ದೇನೆ ಎಂದು ಹೇಳಿದ್ದಾಳೆ.

ಆಕೆಯ ಪತಿಯ ಹೆಸರು ಸ್ವೀಡಿಷ್​ ಭಾಷೆಯಲ್ಲಿದ್ದು ಆಕೆಗೆ ಅದನ್ನ ಹೇಗೆ ಉಚ್ಛಾರ ಮಾಡಬೇಕು ಅಂತಾನೇ ಅರ್ಥವಾಗುತ್ತಿರಲಿಲ್ಲವಂತೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು 13 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...