alex Certify ಪ್ರವಾಹೋಪಾದಿಯಲ್ಲಿ ಹರಿಯಿತು ರೆಡ್ ವೈನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಹೋಪಾದಿಯಲ್ಲಿ ಹರಿಯಿತು ರೆಡ್ ವೈನ್

ವೈನ್ ಪ್ರಿಯರಿಗೆ ಇದೊಂದು ಸಂಕಟ ಉಂಟುಮಾಡುವ ವಿಚಾರ. ಬರೋಬ್ಬರಿ ಐವತ್ತು ಸಾವಿರ ಲೀಟರ್ ರೆಡ್ ವೈನ್ ಹೊಂದಿದ್ದ ವೈನರಿ ಟ್ಯಾಂಕ್ ಸ್ಫೋಟಗೊಂಡ ಪ್ರಕರಣ ನಡೆದಿದೆ.

ಸ್ಪೇನ್‌ನಲ್ಲಿ ನಡೆದ ಈ ಘಟನೆಯಲ್ಲಿ ಶೇಖರಣಾ ಟ್ಯಾಂಕ್ ಹಾನಿಗೊಳಗಾಗಿ ಸ್ಫೋಟಗೊಂಡ ನಂತರ 50 ಸಾವಿರ ಲೀಟರ್ ಕೆಂಪು ವೈನ್ ವ್ಯರ್ಥವಾಯಿತು.

ವೈನ್ ಟ್ಯಾಂಕ್‌ನಿಂದ ಚಿಮ್ಮಿ ಪ್ರವಾಹದ ರೀತಿ ಹೊರಹೋಗುವುದು ಮತ್ತು ಕಾರ್ಖಾನೆಯ ಮೈದಾನದಲ್ಲಿ ಪ್ರವಾಹ ರೀತಿ ಕಾಣಿಸುವ ವಿಡಿಯೋ ಕ್ಲಿಪ್ ವೈರಲ್ ಆಗಿದೆ.

ಐಬೇರಿಯನ್ ದ್ವೀಪದ ಆಗ್ನೇಯ ದಿಕ್ಕಿನಲ್ಲಿರುವ ವಿಟಿವಿನೋಸ್ ವೈನರಿನಲ್ಲಿ ಈ ದುರಂತ ಘಟನೆ ನಡೆದಿದೆ. 1969 ರಿಂದಲೂ ಇರುವ ವೈನರಿಯಲ್ಲಿ 1,570 ಹೆಕ್ಟೇರ್ ದ್ರಾಕ್ಷಿತೋಟ‌ ಇದೆ.

ಈ ವಿಡಿಯೋ ಕ್ಲಿಪ್‌ ಅನ್ನು ಮೊದಲ ಬಾರಿಗೆ ಟ್ವಿಟರ್‌ನಲ್ಲಿ ಸ್ಥಳೀಯ ರೇಡಿಯೊ ಸ್ಟೇಷನ್ ರೇಡಿಯೊ ಅಲ್ಬಾಸೆಟ್ ಸೆಪ್ಟೆಂಬರ್ 25 ರಂದು ಹಂಚಿಕೊಂಡಿತ್ತು. ಇದು ಈಗ ಸಾವಿರಾರು ಪ್ರತಿಕ್ರಿಯೆಗಳೊಂದಿಗೆ 8 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...