alex Certify ಪರಾಭವದ ನಂತರ​ ಟ್ರಂಪ್​ ನಿವಾಸದ ಎದುರು ಹಾರಾಡುತ್ತಿದೆ ಈ ಬ್ಯಾನರ್.​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಾಭವದ ನಂತರ​ ಟ್ರಂಪ್​ ನಿವಾಸದ ಎದುರು ಹಾರಾಡುತ್ತಿದೆ ಈ ಬ್ಯಾನರ್.​..!

ಫ್ಲೋರಿಡಾದಲ್ಲಿರುವ ಡೊನಾಲ್ಡ್ ಟ್ರಂಪ್​ ರೆಸಾರ್ಟ್​ ಎದುರು ಅತಿ ಕೆಟ್ಟ ಅಧ್ಯಕ್ಷ ಎಂಬ ಬ್ಯಾನರ್​ ಒಂದು ಆಕಾಶದಲ್ಲಿ ಹಾರಾಡುತ್ತಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ರೌಂಡ್ಸ್ ಹಾಕುತ್ತಿದೆ.

ಡೇನಿಯಲ್​ ಉಹ್ಲ್​ಫೆಲ್ಡರ್​ ಎಂಬವರು ಟ್ವಿಟರ್​ನಲ್ಲಿ ಈ ವಿಡಿಯೋವನ್ನ ಶೇರ್​ ಮಾಡಿದ್ದಾರೆ. ವಿಮಾನವೊಂದರ ಹಿಂದೆಯೇ ಈ ಬ್ಯಾನರ್ ಹಾರಿಕೊಂಡು ಬರೋದನ್ನ ನೀವು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನೊಂದು ವಿಡಿಯೋದಲ್ಲಿ ಕರುಣಾಜನಕವಾಗಿ ಸೋತವನು ಎಂದು ಬರೆದ ಬ್ಯಾನರ್​ ಹಾರಾಡುತ್ತಿರೋದನ್ನ ಕಾಣಬಹುದಾಗಿದೆ.

ಹೆಚ್​1ಬಿ ವೀಸಾದಾರರಿಗೆ ಬಿಗ್​ ರಿಲೀಫ್​: ಬಿಡೆನ್​ ಸರ್ಕಾರದಿಂದ ಮಹತ್ವದ ನಿರ್ಧಾರ

ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬಿಡೆನ್​ ಪದಗ್ರಹಣ ಮಾಡುವ ಕೆಲವೇ ಗಂಟೆಗಳು ಶ್ವೇತ ಭವನ ಖಾಲಿ ಮಾಡಿದ ಟ್ರಂಪ್​ ಫ್ಲೋರಿಡಾದ ಪಾಮ್​ ಬೀಚ್​ ಬಳಿ ಇರುವ ರೆಸಾರ್ಟ್​ಗೆ ತೆರಳಿದ್ದಾರೆ. ಇದೀಗ ಈ ರೆಸಾರ್ಟ್​ನ ಎದುರು ಈ ವಿಚಿತ್ರವಾದ ಬ್ಯಾನರ್​ಗಳು ಹಾರಾಡುತ್ತಿದ್ದು ನೆಟ್ಟಿಗರು ಚಿತ್ರ ವಿಚಿತ್ರವಾಗಿ ಕಮೆಂಟ್​ ಮಾಡ್ತಿದ್ದಾರೆ .

— Daniel Uhlfelder (@DWUhlfelderLaw) January 24, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...