alex Certify ಚಾಲಕನಿಲ್ಲದೆ ತನ್ನಿಂದ ತಾನೇ ಚಲಿಸಿದ ವಾಹನ..! ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲಕನಿಲ್ಲದೆ ತನ್ನಿಂದ ತಾನೇ ಚಲಿಸಿದ ವಾಹನ..! ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ

Truck Starts Rolling Away Without Driver. Then... - News Ki Factory

ಸಿನಿಮಾಗಳಲ್ಲಿ, ಧಾರವಾಹಿಗಳಲ್ಲಿ ಭೂತದ ಸನ್ನಿವೇಶ ಬರುವಾಗ ಚಾಲಕರಿಲ್ಲದೇ ಗಾಡಿಗಳು ಓಡಾಡುವ ಸನ್ನಿವೇಶಗಳನ್ನೆಲ್ಲಾ ತೋರಿಸುತ್ತಾರೆ. ಆದರೆ ನಿಜ ಜೀವನದಲ್ಲೂ ಹೀಗಾದ್ರೆ ಎದೆ ಝಲ್​ ಎನ್ನದೇ ಇರದು. ಆದರೆ ಬ್ರೆಜಿಲ್​​ನ ಸಿಸಿ ಕ್ಯಾಮರಾ ಒಂದರಲ್ಲಿ ಇಂತಹದ್ದೇ ಒಂದು ಸನ್ನಿವೇಶ ಸೆರೆಯಾಗಿದೆ.

ಟ್ರಕ್​ನಲ್ಲಿ ಸಿಲಿಂಡರ್​ ಲೋಡ್​ ಮಾಡಿದ್ದ ಚಾಲಕ ವಾಹನವನ್ನ ನ್ಯೂಟ್ರಲ್​ನಲ್ಲಿ ಇಟ್ಟಿದ್ದ. ಆದರೆ ಅಚಾನಕ್​ ಆಗಿ ಫಸ್ಟ್​ ಗಿಯರ್​ಗೆ ಬಂದ ವಾಹನ ತನ್ನಿಂದ ತಾನೇ ಚಲಿಸಲು ಶುರುವಾಗಿದೆ.

ಆದರೆ ಚಾಲಕ ಶತ ಪ್ರಯತ್ನ ಪಟ್ಟು ಯಾವುದೇ ಅನಾಹುತ ಮಾಡದೇ ಟ್ರಕ್​ನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾನೆ.

ಏಪ್ರಿಲ್​ 7ನೇ ತಾರೀಖಿನಂದು ಬ್ರೆಜಿಲ್​ನ ಮಿನಾಸ್​ ಗೆರೈಸ್​​ನ ಇಬಿರೈಟ್​​​ನಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಚಾಲಕನ ಸಮಯ ಪ್ರಜ್ಞೆಗೆ ಸಲಾಂ ಹೊಡೆದಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...