alex Certify ಕಣ್ಮುಚ್ಚಿ ತೆರೆಯೋವಷ್ಟರಲ್ಲಿ ಕುಸಿದ ಪರ್ವತ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಮುಚ್ಚಿ ತೆರೆಯೋವಷ್ಟರಲ್ಲಿ ಕುಸಿದ ಪರ್ವತ…!

ಸ್ಪ್ಯಾನಿಶ್​ ಐಲ್ಯಾಂಡ್​ನ ದ್ವೀಪವೊಂದರಲ್ಲಿ ಸಮುದ್ರದ ಬಳಿ ಇದ್ದ ಬಂಡೆಯ ಬೃಹತ್ ಭಾಗವೊಂದು ಅಚಾನಕ್ಕಾಗಿ ಕುಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಸ್ಪೇನ್​​ನ ಸಣ್ಣ ದ್ವೀಪ ಲಾ ಗೊಮೆರಾದಲ್ಲಿ ಈ ಘಟನೆ ನಡೆದಿದೆ. ಈ ಘಟನೆ ಬೆಳಕಿಗೆ ಬರ್ತಿದ್ದಂತೆ ಸ್ಥಳಕ್ಕೆ ತೆರಳಿದ ರಕ್ಷಣಾ ಇಲಾಖೆ ಕಾರ್ಯಾಚರಣೆ ನಡೆಸಿದೆ.

ಈ ಬಗ್ಗೆ ಮಾತನಾಡಿರುವ ಕೆನರಿ ದ್ವೀಪಗಳ ಅಧ್ಯಕ್ಷ, ಪರಿಸ್ಥಿತಿ ಸದ್ಯಕ್ಕೆ ಹತೋಟಿಯಲ್ಲಿದೆ. ಆದರೆ ಬಂಡೆಯಲ್ಲಿ ಬಿರುಕುಗಳು ಇರೋದ್ರಿಂದ ಜನತೆ ಈ ಕಡೆ ಪ್ರಯಾಣ ಮಾಡಬೇಡಿ ಅಂತಾ ಮನವಿ ಮಾಡಿದ್ದಾರೆ.

ಸ್ಥಳೀಯ ಸರ್ಕಾರ ಹಾಗೂ ರಕ್ಷಣಾ ಇಲಾಖೆ ಎರಡು ಹೆಲಿಕಾಪ್ಟರ್​ಗಳನ್ನ ಘಟನಾ ಸ್ಥಳಕ್ಕೆ ರವಾನಿಸಿದ್ದು ಸಮೀಕ್ಷೆ ನಡೆಸಿದೆ . ಅಲ್ಲದೇ ಅವಘಡದಲ್ಲಿ ಯಾವುದೇ ಪ್ರಾಣಹಾನಿ ವರದಿ ಆಗಿಲ್ಲ ಎನ್ನಲಾಗಿದೆ.

ಭೂಕುಸಿತದ ವೇಳೆ ಸ್ಥಳದಲ್ಲಿದ್ದ ಐವರನ್ನ ಹೆಲಿಕಾಪ್ಟರ್​ ಮೂಲಕ ಅಲ್ಲಿಂದ ಸ್ಥಳಾಂತರಿಸಲಾಗಿದೆ. ಇವರಲ್ಲಿ ಯಾರಿಗೂ ಚಿಕಿತ್ಸೆಯ ಅಗತ್ಯವಿಲ್ಲ ಅಂತಾ ಅಧಿಕಾರಿಗಳು ಹೇಳಿದ್ದಾರೆ.

— Ángel Víctor Torres Pérez (@avtorresp) November 14, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...