alex Certify ತಪ್ಪಾಗಿ ಔಷಧಿ ಸೇವಿಸಿದಕ್ಕೆ ಮಕ್ಕಳಿಗೆ ಬಂತು ಈ ವಿಚಿತ್ರ ಕಾಯಿಲೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಪ್ಪಾಗಿ ಔಷಧಿ ಸೇವಿಸಿದಕ್ಕೆ ಮಕ್ಕಳಿಗೆ ಬಂತು ಈ ವಿಚಿತ್ರ ಕಾಯಿಲೆ..!

ಸ್ಪ್ಯಾನಿಶ್​ನ 20 ಮಕ್ಕಳಿಗೆ ಹೊಟ್ಟೆಯ ನೋವಿಗೆ ಔಷಧಿ ನೀಡುವ ಬದಲು ತಪ್ಪಾಗಿ ಕೂದಲು ಬೆಳೆಯುವ ಔಷಧಿ ನೀಡಿದ ಪರಿಣಾಮ ಮಕ್ಕಳ ಮೈ ತುಂಬಾ ಕೂದಲು ಬೆಳೆದ ವಿಚಿತ್ರ ಘಟನೆ ನಡೆದಿದೆ. ಸಿರಪ್​​ಗಳ ಮೇಲೆ ಹೆಸರು ತಪ್ಪಾಗಿ ನಮೂದಾದ ಕಾರಣ ಈ ಅಚಾತುರ್ಯ ಸಂಭವಿಸಿದೆ ಎನ್ನಲಾಗಿದೆ.

ಮಕ್ಕಳಿಗೆ ಒಮೆಪ್ರಜೋಲ್​ ನೀಡುವ ಬದಲಾಗಿ ಮಿನಿಕ್ಸಿಡಿಲ್​ ನೀಡಿದ ಪರಿಣಾಮ ಈ ಅಚಾತುರ್ಯ ಸಂಭವಿಸಿದೆ ಅಂತಾ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯ ಚಿಕ್ಕ ಮಕ್ಕಳ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಕೂದಲು ಬೆಳೆದಿದ್ದು ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಮಕ್ಕಳು ಉತ್ತರ ಸ್ಪ್ಯಾನಿಶ್​​ನ ಕ್ಯಾಂಟಬ್ರಿಯಾ ಟೊರೆವೆಗಾ ನಿವಾಸಿಗಳೆಂದು ಗುರುತಿಸಲಾಗಿದೆ. 2018ರಲ್ಲಿ ಮಕ್ಕಳು ತಪ್ಪಾಗಿ ಈ ಔಷಧಿ ಸೇವಿಸಿದ್ದಾರೆ.

ಮಕ್ಕಳ ದೇಹದಲ್ಲಾಗಿರುವ ಈ ವಿಚಿತ್ರ ಬೆಳವಣಿಗೆಯಿಂದ ಕಂಗಾಲಾಗಿರುವ ಪೋಷಕರು ಔಷಧಿ ತಯಾರಿಕಾ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಾಗೂ ಮಕ್ಕಳ ದೇಹದಲ್ಲಾದ ಈ ಸಮಸ್ಯೆಗೆ ಪರಿಹಾರ ಹುಡುಕಿಕೊಂಡು ಆಸ್ಪತ್ರೆ ಅಲೆಯುತ್ತಿದ್ದಾರೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...