alex Certify ಆರು ಭಾಷೆಗಳಲ್ಲಿ ವರದಿ ನೀಡಿ ಅಚ್ಚರಿ ಮೂಡಿಸಿದ ರಿಪೋರ್ಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರು ಭಾಷೆಗಳಲ್ಲಿ ವರದಿ ನೀಡಿ ಅಚ್ಚರಿ ಮೂಡಿಸಿದ ರಿಪೋರ್ಟರ್

ವಾಷಿಂಗ್ಟನ್​ ಮೂಲದ ಹಿರಿಯ ಪತ್ರಕರ್ತನೊಬ್ಬ ಬರೋಬ್ಬರಿ 6 ಭಾಷೆಗಳಲ್ಲಿ ವರದಿ ಮಾಡುತ್ತಿರುವ ವಿಡಿಯೋ ವೈರಲ್​ ಆಗಿದ್ದು, ಹಿರಿಯ ಪತ್ರಕರ್ತನ ಕುಶಲತೆಗೆ ಟ್ವಿಟರ್​​​ನಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗ್ತಿದೆ.

ಬಹುಭಾಷಾ ವರದಿಗಾರ ಫಿಲಿಪ್​ ಕ್ರೌಥರ್​​ ಫ್ರಾನ್ಸ್ 24ರ ಶ್ವೇತಭವನದ ಪತ್ರಕರ್ತರಾಗಿದ್ದಾರೆ. ಇಂಗ್ಲಿಷ್​ ಹಾಗೂ ಫ್ರೆಂಚ್​ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಕ್ರೌಥರ್​​​ಗೆ ಇತರೆ ಭಾಷೆಗಳ ಮೇಲೂ ಉತ್ತಮ ಹಿಡಿತವಿದೆ.

ಬ್ರಿಟಿಷ್​ ತಂದೆ ಹಾಗೂ ಜರ್ಮನ್​ ತಾಯಿಯ ಪುತ್ರರಾದ ಫಿಲಿಫ್​, ಜರ್ಮನ್​, ಫ್ರೆಂಚ್​, ಸ್ಪ್ಯಾನಿಶ್​, ಇಂಗ್ಲಿಷ್​ ಹಾಗೂ ಪೋರ್ಚುಗೀಸ್​ ಭಾಷೆಯನ್ನ ನಿರರ್ಗಳವಾಗಿ ಮಾತನಾಡಬಲ್ಲರು. ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಕ್ರೌಥರ್​ ಟ್ಯಾಲೆಂಟ್​ಗೆ ನೆಟ್ಟಿಗರು ತಲೆ ಬಾಗಿದ್ದಾರೆ.

— Philip Crowther (@PhilipinDC) January 12, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...