
ಸ್ಪೇನ್ನ ಸಣ್ಣ ದ್ವೀಪ ಲಾ ಗೊಮೆರಾದಲ್ಲಿ ಈ ಘಟನೆ ನಡೆದಿದೆ. ಈ ಘಟನೆ ಬೆಳಕಿಗೆ ಬರ್ತಿದ್ದಂತೆ ಸ್ಥಳಕ್ಕೆ ತೆರಳಿದ ರಕ್ಷಣಾ ಇಲಾಖೆ ಕಾರ್ಯಾಚರಣೆ ನಡೆಸಿದೆ.
ಈ ಬಗ್ಗೆ ಮಾತನಾಡಿರುವ ಕೆನರಿ ದ್ವೀಪಗಳ ಅಧ್ಯಕ್ಷ, ಪರಿಸ್ಥಿತಿ ಸದ್ಯಕ್ಕೆ ಹತೋಟಿಯಲ್ಲಿದೆ. ಆದರೆ ಬಂಡೆಯಲ್ಲಿ ಬಿರುಕುಗಳು ಇರೋದ್ರಿಂದ ಜನತೆ ಈ ಕಡೆ ಪ್ರಯಾಣ ಮಾಡಬೇಡಿ ಅಂತಾ ಮನವಿ ಮಾಡಿದ್ದಾರೆ.
ಸ್ಥಳೀಯ ಸರ್ಕಾರ ಹಾಗೂ ರಕ್ಷಣಾ ಇಲಾಖೆ ಎರಡು ಹೆಲಿಕಾಪ್ಟರ್ಗಳನ್ನ ಘಟನಾ ಸ್ಥಳಕ್ಕೆ ರವಾನಿಸಿದ್ದು ಸಮೀಕ್ಷೆ ನಡೆಸಿದೆ . ಅಲ್ಲದೇ ಅವಘಡದಲ್ಲಿ ಯಾವುದೇ ಪ್ರಾಣಹಾನಿ ವರದಿ ಆಗಿಲ್ಲ ಎನ್ನಲಾಗಿದೆ.
ಭೂಕುಸಿತದ ವೇಳೆ ಸ್ಥಳದಲ್ಲಿದ್ದ ಐವರನ್ನ ಹೆಲಿಕಾಪ್ಟರ್ ಮೂಲಕ ಅಲ್ಲಿಂದ ಸ್ಥಳಾಂತರಿಸಲಾಗಿದೆ. ಇವರಲ್ಲಿ ಯಾರಿಗೂ ಚಿಕಿತ್ಸೆಯ ಅಗತ್ಯವಿಲ್ಲ ಅಂತಾ ಅಧಿಕಾರಿಗಳು ಹೇಳಿದ್ದಾರೆ.