alex Certify ಕ್ಯಾಮರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಮರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಹೈಕರ್‌ ಒಬ್ಬರನ್ನು ಮಲೆ ಸಿಂಹ (ಪ್ಯೂಮಾ) ಅಟ್ಟಿಸಿಕೊಂಡು ಹೋಗುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ಅಮೆರಿಕ ಉತಾಹ್‌ ರಾಜ್ಯದ ಗುಡ್ಡಗಾಡು ಪ್ರದೇಶದಲ್ಲಿ ವಿಹರಿಸುತ್ತಿದ್ದ ಕೈಲೆ ಬರ್ಗೆಸ್‌ ಹೆಸರಿನ ವ್ಯಕ್ತಿಗೆ ಈ ಅನುಭವ ಆಗಿದೆ.

ಇಲ್ಲಿನ ಸ್ಲೇಟ್ ಕ್ಯಾನ್ಯನ್‌ ಟ್ರೇಲ್‌ನಲ್ಲಿ ಹೈಕಿಂಗ್ ಮಾಡುತ್ತಿದ್ದ ಕೈಲೆ, ತಾವು ಹೋಗುತ್ತಿದ್ದ ರಸ್ತೆಯ ತುದಿಯಲ್ಲಿ ಯಾವುದೋ ಒಂದು ಪ್ರಾಣಿಯನ್ನು ಕಂಡಿದ್ದಾರೆ. ಅದು ಪ್ಯೂಮಾ ಎಂದು ಅದರ ಹೆಜ್ಜೆಗಳನ್ನು ನೋಡಿದಾಗ ತಿಳಿದಿದೆ.

“ಮೊದಲಿಗೆ ಬಾಬ್ ‌ಕ್ಯಾಟ್‌ಗಳು ಎಂದುಕೊಂಡ ಬೆಕ್ಕುಗಳು ಪ್ಯೂಮಾದ ಮರಿಗಳು ಎಂದು ತಿಳಿಯುತ್ತಲೇ, ಅದರ ಅಮ್ಮ ನನ್ನನ್ನು ಹಿಮ್ಮೆಟ್ಟಲು ಶುರು ಮಾಡಿದೆ. ಆರು ನಿಮಿಷಗಳ ಕಾಲ ಆಕ್ರಮಣಶೀಲ ಭಾವ ತೋರಿದ ಪ್ಯೂಮಾ ಕಂಡು ನಾನು ಹಿಮ್ಮುಖವಾಗಿ ನಡೆಯುತ್ತಾ ಸಾಗಿದೆ. ಬಹಳ ಭಯ ಮೂಡಿಸುವ ಅನುಭವ ಇದು” ಎಂದು ಕೈಲೆ ತನ್ನ ಅನುಭವ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...