alex Certify ಉಚಿತ ನೆಟ್‌ ಫ್ಲಿಕ್ಸ್ ಪಡೆಯಲು ಹೋಗಿ ಬೇಸ್ತುಬಿದ್ದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಚಿತ ನೆಟ್‌ ಫ್ಲಿಕ್ಸ್ ಪಡೆಯಲು ಹೋಗಿ ಬೇಸ್ತುಬಿದ್ದ ಜನ

WATCH: Man Who Shared Free Wifi Returns With Netflix Account Details. Netizens Are in Splits

ನೆಟ್‌ಫ್ಲಿಕ್ಸ್ ಖಾತೆಯ ಲಾಗಿನ್ ವಿವರಗಳನ್ನು ಕೊಡಲು ಸ್ನೇಹಿತರಿಗೆ ನಾವೆಷ್ಟು ಬಾರಿ ದಂಬಾಲು ಬಿದ್ದಿಲ್ಲ..? ಬಹಳ ಇಂಟೆರೆಸ್ಟಿಂಗ್ ಕ್ರೈಂ ಸೀರೀಸ್, ಅಥವಾ ಸಿನಿಮಾಗಳನ್ನು ನೋಡಲು ನೆಟ್‌ಫ್ಲಿಕ್ಸ್‌ನ ಅಕ್ಸೆಸ್‌ಗಾಗಿ ಜನರು ಬಹಳ ಎಡತಾಕುತ್ತಾರೆ.

ಉಚಿತ ವೈ-ಫೈ ಕೊಡುವುದಾಗಿ ತಮ್ಮ ಮಾರುದ್ದದ ಪಾಸ್‌ವರ್ಡ್ ಮೂಲಕ ಜನರ ಕಿವಿ ಮೇಲೆ ಹೂ ಇಟ್ಟಿದ್ದ ಸ್ಯಾನ್‌ ಫ್ರಾನ್ಸಿಸ್ಕೋದ ಆರ್ಟ್ ಡೈರೆಕ್ಟರ್‌ ನೆನಪಿದ್ದಾರೆಯೇ? ಇದೀಗ ಆತ ಮತ್ತೊಮ್ಮೆ ಕಾಣಿಸಿಕೊಂಡಿದ್ದು, ಈ ಬಾರಿ ಮತ್ತೊಂದು ಪ್ರಾಂಕ್ ಮಾಡುತ್ತಿದ್ದಾರೆ.

ಪಾಬ್ಲೋ ರೋಚಾಟ್‌ ಹೆಸರಿನ ಆರ್ಟ್ ಡೈರೆಕ್ಟರ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ರಸ್ತೆ ಬದಿಯಲ್ಲಿರುವ ವಿದ್ಯುತ್‌ ಕಂಬಕ್ಕೆ ಭಿತ್ತಿಪತ್ರವೊಂದನ್ನು ಅಂಟಿಸಿರುವ ವಿಡಿಯೋವೊಂದನ್ನು ಶೇರ್‌ ಮಾಡಿದ್ದಾರೆ. ನೆಟ್‌ಫ್ಲಿಕ್ಸ್‌ ಅಕೌಂಟ್ ಹಾಗೂ ಪಾಸ್‌ವರ್ಡ್ ಉಚಿತವಾಗಿ ಸಿಗುವುದಾಗಿ ಹೇಳಿ ಜನರನ್ನು ಸಖತ್ತಾಗಿ ಫೂಲ್ ಮಾಡುತ್ತಿದ್ದಾರೆ ರೋಚಟ್. ಹೇಗೆ ಎಂದಿರಾ? ನೀವೂ ಒಮ್ಮೆ ಈ ವಿಡಿಯೋವನ್ನು ನೋಡಿ.

View this post on Instagram

Good luck 🙂

A post shared by Pablo Rochat (@pablo.rochat) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...