alex Certify ರೋಚಕವಾಗಿದೆ ಪಂಜರದಲ್ಲಿ ಸಿಲುಕಿದ್ದ ಡಾಲ್ಫಿನ್​ನ ರಕ್ಷಣಾ ಕಾರ್ಯದ ದೃಶ್ಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಚಕವಾಗಿದೆ ಪಂಜರದಲ್ಲಿ ಸಿಲುಕಿದ್ದ ಡಾಲ್ಫಿನ್​ನ ರಕ್ಷಣಾ ಕಾರ್ಯದ ದೃಶ್ಯ..!

ಜಲಾಂತರ್ಗಾಮಿ ಪ್ರವಾಸಕ್ಕೆ ಹೊರಟಿದ್ದ ಅಮೆರಿಕದ ವ್ಯಕ್ತಿಯೊಬ್ಬ ಬಲೆಯಲ್ಲಿ ಸಿಲುಕಿದ್ದ ಡಾಲ್ಫಿನ್​​ನ ಜೀವ ಉಳಿಸಿದ್ದಾನೆ. ಫ್ಲೋರಿಡಾದಲ್ಲಿ ಸೆರೆಯಾದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.

ಫೇಸ್​ ಬುಕ್​​ನಲ್ಲಿ ಶೇರ್​ ಆದ ವಿಡಿಯೋದಲ್ಲಿ ನಿಕ್ ಎಂಬ ವ್ಯಕ್ತಿ ತನ್ನ ಸ್ನೇಹಿತನ ಜೊತೆ ಬಿಸ್ಕೆನ್​ ಕೊಲ್ಲಿಯಲ್ಲಿ ಜೆಟ್​ ರೈಡ್​ ಎಂಜಾಯ್​ ಮಾಡುತ್ತಿದ್ದರು. ಈ ವೇಳೆ ಪಂಜರದಲ್ಲಿ ಸಿಲುಕಿ ಹಾಕಿಕೊಂಡಿದ್ದ ಡಾಲ್ಫಿನ್​ ತೊಳಲಾಟ ಗಮನಿಸಿದ ಈ ಸ್ನೇಹಿತರು ರಕ್ಷಣೆಗೆ ಮುಂದಾಗಿದ್ದಾರೆ.

ನಿಕ್​ ಮತ್ತಾತನ ಸ್ನೇಹಿತ ಕ್ರೆಗ್​ ಚಾಕು ಬಳಸಿ ಸಾಕಷ್ಟು ಹರಸಾಹಸದ ಬಳಿಕ ಡಾಲ್ಫಿನ್​ನ ಬಲೆ ಮಾದರಿಯ ಪಂಜರದಿಂದ ಪಾರು ಮಾಡಿದ್ದಾರೆ. ನಿಕ್​ ಕ್ಯಾಮರಾದಲ್ಲಿ ಈ ಎಲ್ಲಾ ದೃಶ್ಯಾವಳಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನ ಹರಿಬಿಟ್ಟಿದ್ದಾರೆ.

Posted by Nicholas Tuduri on Friday, November 27, 2020

Posted by Nicholas Tuduri on Friday, November 27, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...