alex Certify ಮೀನುಗಾರರ ಮಾನವೀಯ ಕಾರ್ಯಕ್ಕೆ ಮನಸೋತ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನುಗಾರರ ಮಾನವೀಯ ಕಾರ್ಯಕ್ಕೆ ಮನಸೋತ ನೆಟ್ಟಿಗರು

ಆಸ್ಟ್ರೇಲಿಯಾದ ಅರಣ್ಯಗಳಲ್ಲಿ ಕಾಡ್ಗಿಚ್ಚು ಸಂಭವಿಸಿದ ಸಂದರ್ಭದಲ್ಲಿ ಅನೇಕರು ಕಾಡು ಪ್ರಾಣಿಗಳ ಜೀವ ಉಳಿಸಲು ಹರಸಾಹಸ ಪಟ್ಟಿದ್ರು. ಇಂತಹ ಪೋಟೋಗಳು, ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು.

ಇತ್ತೀಚೆಗೆ ಮೀನುಗಾರರ ಗುಂಪೊಂದು ನದಿಯಲ್ಲಿ ಬಿದ್ದಿದ್ದ ಕೋತಿಯನ್ನ ಪ್ರಾಣಾಪಾಯದಿಂದ ಕಾಪಾಡಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ.

ಬ್ರೆಜಿಲ್​​ ರಿಯೋ ಗ್ರಾಂಡೆ ಡೋ ಸುಲ್​​ನ ಟ್ರೆಸ್​ ವೆಂಡಾನ್​ ನದಿಯಲ್ಲಿ ಈ ಘಟನೆ ಸಂಭವಿಸಿದೆ. ನೀರಿನಲ್ಲಿ ಮುಳುಗಿ ಈಜಲಾಗದೇ ದಣಿದಿದ್ದ ಕೋತಿಯೊಂದನ್ನ ದೋಣಿಯ ಮೇಲಿದ್ದ ಮೀನುಗಾರರ ಗುಂಪೊಂದು ನೋಡಿದೆ.

ಕೂಡಲೇ ತಮ್ಮ ಹುಟ್ಟನ್ನ ಕೋತಿಯ ಹತ್ತಿರ ಇಟ್ಟಿದ್ದಾರೆ. ಈ ಹುಟ್ಟನ್ನ ಹಿಡಿದುಕೊಂಡಿದ್ದ ಕೋತಿಯನ್ನ ಮರದ ಬಳಿ ಕರೆದೊಯ್ದು ಅದು ರೆಂಬೆಯನ್ನ ಹತ್ತುವವರೆಗೂ ಮೀನುಗಾರರು ಸಹಾಯ ಮಾಡಿದ್ದಾರೆ. ನೆಟ್ಟಿಗರು ಮೀನುಗಾರರ ಮಾನವೀಯತೆಯನ್ನ ಪ್ರಶಂಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...