alex Certify ಡ್ರೋಣ್​ ಕ್ಯಾಮರಾದಲ್ಲಿ ಸೆರೆಯಾಯ್ತು ಅಪರೂಪದ ಬೀಚ್ ಸೌಂದರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರೋಣ್​ ಕ್ಯಾಮರಾದಲ್ಲಿ ಸೆರೆಯಾಯ್ತು ಅಪರೂಪದ ಬೀಚ್ ಸೌಂದರ್ಯ

ಮೆಕ್ಸಿಕೋದ ದ್ವೀಪವೊಂದರ ಮೇಲೆ ಹಾರಾಟ ನಡೆಸಿದ ಡ್ರೋಣ್​ ಕ್ಯಾಮರಾದ ಕಣ್ಣಿಗೆ ಕುಳಿಯೊಳಗೆ ಇದ್ದ ಸುಂದರ ಸಮುದ್ರವೊಂದು ಕಂಡಿದೆ.

ಫೋಟೋಗ್ರಾಫರ್​ ಟರಾಸಿಯೋ ಸೌರೇಜ್​ ಅವರು ಮೆಕ್ಸಿಕೋದ ಮೆರಿಯಟಾಸ್​ ದ್ವೀಪದ ಮೇಲೆ ಡ್ರೋಣ್​ ಕ್ಯಾಮರಾ ಹಾರಿಸಿದ್ರು. ಇದೇ ದ್ವೀಪದಲ್ಲಿದ್ದ ಹಿಡನ್​ ಬೀಚ್​ ಡ್ರೋಣ್​ ಕಣ್ಣಲ್ಲಿ ಅತ್ಯಂತ ಅಮೋಘವಾಗಿ ಗೋಚರವಾಗಿದೆ.

ಬಹಳ ವರ್ಷಗಳ ಹಿಂದೆ ಜ್ವಾಲಾಮುಖಿ ಚಟುವಟಿಕೆಯಿಂದಾಗಿ ಈ ಮೆರಿಯೆಟಾಸ್​​ ದ್ವೀಪಗಳು ರೂಪುಗೊಂಡಿದ್ದವು. ಈ ದ್ವೀಪವನ್ನ ಮೆಕ್ಸಿಕನ್​ ಸರ್ಕಾರ ಮಿಲಟರಿ ಅಭ್ಯಾಸಕ್ಕೆ ಬಳಸಿಕೊಳ್ತಿದೆ. ಇಲ್ಲಿ ಪದೇ ಪದೇ ಬಾಂಬ್​ ಸ್ಪೋಟ ಮಾಡಿದ್ದರಿಂದ ಉಂಟಾದ ಕುಳಿಗಳಿಂದಾಗಿ ಬೀಚ್​ ಸೃಷ್ಟಿಯಾಗಿದೆ ಅಂತಾ ಹೇಳಲಾಗ್ತಿದೆ.

2005ರಲ್ಲಿ ಮೆಕ್ಸಿಕನ್​ ಸರ್ಕಾರ ಈ ದ್ವೀಪಗಳನ್ನ ರಾಷ್ಟ್ರೀಯ ಉದ್ಯಾನವನವೆಂದು ಗುರುತಿಸಿದೆ. ಹಾಗೂ ಈ ದ್ವೀಪ ಮೆಕ್ಸಿಕನ್​ ಫೆಡರಲ್​ ಸರ್ಕಾರದ ವಶದಲ್ಲಿದೆ. ದ್ವೀಪದಲ್ಲಿರುವ ಜೀವ ಸಂಕುಲ ಹಾಗೂ ಸಸ್ಯ ಪ್ರಬೇಧಗಳನ್ನ ರಕ್ಷಿಸುವ ಸಲುವಾಗಿ ಈ ಕಡಲತೀರದ ಬಳಿ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿದೆ.

A stunning beach in Mexico ?

A stunning natrual private beach in Mexico ?Postandfly

Posted by Aurora Borealis Observatory on Sunday, October 11, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...