alex Certify ಹಗ್ಗದಿಂದ ತಿಮಿಂಗಿಲ ರಕ್ಷಿಸಿದ ರೋಚಕ ವಿಡಿಯೊ ‌ʼವೈರಲ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಗ್ಗದಿಂದ ತಿಮಿಂಗಿಲ ರಕ್ಷಿಸಿದ ರೋಚಕ ವಿಡಿಯೊ ‌ʼವೈರಲ್ʼ

Thai divers try to free distressed whale shark caught in rope ...

ತಿಮಿಂಗಿಲದ ಬಾಲಕ್ಕೆ ಸುತ್ತಿಕೊಂಡಿದ್ದ ಹಗ್ಗವನ್ನು ಥೈಲ್ಯಾಂಡ್‌ ಡೈವರ್‌ಗಳ ತಂಡ ಬಿಡಿಸುವ ರೋಚಕ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಥೈಲ್ಯಾಂಡ್‌ನ ದಕ್ಷಿಣ ಭಾಗದಲ್ಲಿರುವ ಸುರಾತ್‌ ಥಾನಿ ಭಾಗದ ಸರಕೋರ್ನ್‌ ಪೊಕಪ್ರಕಾನ್‌ ಡೈವರ್‌ ತಂಡ, ಎಂದಿನಂತೆ ಸಮುದ್ರದಲ್ಲಿ ಡೈವಿಂಗ್‌ ನಡೆಸುತ್ತಿದ್ದರು. ಈ ವೇಳೆ ತಿಮಿಂಗಿಲ ಒಂದರ ಬಾಲಕ್ಕೆ ಹಗ್ಗ ಸುತ್ತಿಕೊಂಡಿರುವುದು ಗಮನಿಸಿದ ಡೈವರ್‌ ತಂಡದ ಸದಸ್ಯರೊಬ್ಬರು, ಕೂಡಲೇ ಚಾಕುವಿನ ಮೂಲಕ ಹಗ್ಗವನ್ನು ಕತ್ತರಿಸಲು ಮುಂದಾದರು. ಇದನ್ನು ಇನ್ನೊಬ್ಬ ಡೈವರ್‌ ವಿಡಿಯೊ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ತಿಮಿಂಗಲದ ಬಾಲಕ್ಕೆ ಹಗ್ಗ ಸುತ್ತಿಕೊಂಡಿರುವುದು ಈಜುವುದಕ್ಕೆ ಸಮಸ್ಯೆಯಾಗುತ್ತಿತ್ತು. ಆದರೆ ಹಗ್ಗವನ್ನು ಕತ್ತರಿಸುವುದಕ್ಕೆ ಆತನ ಬಳಿಯಿದ್ದ ಚಾಕು ಚಿಕ್ಕದಾಗಿತ್ತು. ಈ ಸಾಹಸಕ್ಕೆ ಕೈಹಾಕಿದಾಗ ಡೈವರ್‌ಗಳ ಮೇಲೆ ದಾಳಿ ಮಾಡುವುದನ್ನು ತಳ್ಳಿಹಾಕುವಂತಿರಲಿಲ್ಲ. ಆದರೆ ಈ ಎಲ್ಲವನ್ನು ಮೆಟ್ಟಿನಿಂತು ತಿಮಿಂಗಲಕ್ಕೆ ಸುತ್ತುಹಾಕಿಕೊಂಡಿದ್ದ ಹಗ್ಗವನ್ನು ಕತ್ತರಿಸುವಲ್ಲಿ ಡೈವರ್‌ ಯಶಸ್ವಿಯಾಗಿದ್ದಾರೆ ಹಗ್ಗ ಕತ್ತರಿಸುತ್ತಿದ್ದಂತೆ ತಿಮಿಂಗಲ ಈಜಿಕೊಂಡು ಹೋಗಿ ಕಣ್ಮರೆಯಾಗಿರುವ ದೃಶ್ಯ ಇದೀಗ ವೈರಲ್‌ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...