alex Certify ಮಹಿಳೆ ಕಾಲಿನ‌ ಫೋಟೋ‌‌ ನೋಡಿ ದಂಗುಬಡಿದ ಜನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆ ಕಾಲಿನ‌ ಫೋಟೋ‌‌ ನೋಡಿ ದಂಗುಬಡಿದ ಜನ…!

ಕೆಲವೊಮ್ಮೆ ನಮ್ಮ‌ನಡುವೆ ನಡೆಯುವ ವಿಚಿತ್ರ ಘಟನೆಗಳು ಎಂತಹ ಧೈರ್ಯ ಶಾಲಿಯ ‌ಕೈಕಾಲು ನಡುಗಿಸಿ ಬಿಡುತ್ತದೆ.

ಕ್ರೊಯೇಷಿಯಾದ ಟೂರ್ ಗೈಡ್ ಇವಾನ್ ರುಬಿಲ್ ಜಾಗ್ರೆಬ್‌‌ನ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ನಿಂತಿರುವ ಫೋಟೋವನ್ನು ಸೆರೆಹಿಡಿದಿದ್ದಾರೆ. ಆದರೆ ಆ ಫೋಟೋ ಅವರಿಗೆ ಚಳಿ ತರಿಸಿದೆ.

ಇವಾನ್ ಅವರು ತಮ್ಮ ಫೋನ್ ಕ್ಯಾಮೆರಾದಲ್ಲಿ ಫೋಟೋ ತೆಗೆದಿದ್ದಾರೆ. ಫೋಟೋ ತುಂಬಾ ಸಾಮಾನ್ಯವಾಗಿಯೇ ಇದೆ. ಆದರೆ 10-15 ನಿಮಿಷಗಳ ನಂತರ ಅದನ್ನು ಹತ್ತಿರದಿಂದ ನೋಡಿದಾಗ ಆಶ್ಚರ್ಯವಾಯಿತು ಎಂದು ಹೇಳಿದ್ದಾರೆ.

ಟಿಕ್ ಟಾಕ್ ಸ್ಟಾರ್ ನಿಂದ ಘೋರ ಕೃತ್ಯ; ಚಿಪ್ಪಡ ಭಾರ್ಗವ ಅರೆಸ್ಟ್

ಏಕೆಂದರೆ ಕಂದು ಬಣ್ಣದ ಕೋಟ್ ಧರಿಸಿದ ಮಹಿಳೆ ಪಾರದರ್ಶಕ ಕಾಲು ಹೊಂದಿರುವುದು ಸ್ಪಷ್ಟವಾಗಿ ಅದರಲ್ಲಿ ಕಾಣಿಸಿದೆ. ಪಾದಚಾರಿ ಮಾರ್ಗದಲ್ಲಿ ಹಾಕಲಾದ ಮಾರ್ಕಿಂಗ್ ಆಕೆ ಅಡ್ಡಲಾಗಿ ನಿಂತಿದ್ದರೂ ಫೋಟೋದಲ್ಲಿ ಕಾಣಿಸುತ್ತಿದೆ.

ಅವರು ಫೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡ ನಂತರ ಅನೇಕರು ಗೊಂದಲಕ್ಕೊಳಗಾದರು. ಆದಾಗ್ಯೂ, ಇದು ಕೇವಲ ಕ್ಯಾಮೆರಾದ ಟ್ರಿಕ್ ಎಂದು ಕೆಲವರು ಅಭಿಪ್ರಾಯ ಹೇಳಿದರು. ಮತ್ತೆ ಕೆಲವರು ದೆವ್ವ ಭೂತ ಎಂದೆಲ್ಲ ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...