alex Certify ನೋಡುಗರನ್ನು ಬೆಚ್ಚಿಬೀಳಿಸುತ್ತೆ ಹೆಬ್ಬಾವಿನ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡುಗರನ್ನು ಬೆಚ್ಚಿಬೀಳಿಸುತ್ತೆ ಹೆಬ್ಬಾವಿನ ವಿಡಿಯೋ

ಹೆಬ್ಬಾವೊಂದು ರಸ್ತೆಯ ನಡುವೆ ಜಿಂಕೆಯನ್ನು ಹಿಡಿದು ಕೊನೆಗೆ ಜನರಿಗೆ ಹೆದರಿ ಬಿಟ್ಟೋಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.‌

ಕಾಹೊವಾ ಕೇವ್ ಓಪನ್‌ ಜೂ‌ನಲ್ಲಿ ಈ ಭಯಾನಕ ವಿಡಿಯೋ ಚಿತ್ರೀಕರಿಸಲಾಗಿದ್ದು, ಡುಸಿಟ್ ಜೂನ ಸಹಾಯಕ‌ ನಿರ್ದೇಶಕರು ಅದನ್ನು ಟ್ವಿಟರ್ ನಲ್ಲಿ ಅಪ್‌ ಲೋಡ್ ಮಾಡಿದ್ದಾರೆ.

24 ಸೆಕೆಂಡ್ ನ ಈ ವಿಡಿಯೋದಲ್ಲಿ ಹೆಬ್ಬಾವು ತನ್ನ ಆಹಾರ ಜಿಂಕೆಯನ್ನು ಹಿಡಿದು ಸುತ್ತಿ ಅದನ್ನು ಸಾಯಿಸಲು ಯತ್ನಿಸುತ್ತದೆ. ಆದರೆ, ಅದನ್ನು ನೋಡಿದ ಪ್ರಯಾಣಿಕರು ಹಾವನ್ನು ಓಡಿಸಲು ಯತ್ನಿಸುತ್ತಾರೆ.‌

ಒಮ್ಮೆ‌ ವಿರೋಧ ವ್ಯಕ್ತಪಡಿಸುವ ಹೆಬ್ಬಾವು ನಂತರ ಮಾನವರಿಗೆ ಹೆದರಿ ಜಿಂಕೆಯನ್ನು ಬಿಟ್ಟೋಡುತ್ತದೆ.‌ ಬದುಕಿದೆಯಾ ಬಡ ಜೀವವೇ ಎಂದು ಜಿಂಕೆ ಚಂಗನೆ ಜಿಗಿದು ರಸ್ತೆಯಿಂದ ಆಚೆ ಮಾಯವಾಗುತ್ತದೆ.‌ ವಿಡಿಯೋ ಶನಿವಾರ ಅಪ್‌ ಲೋಡ್ ಆಗಿದ್ದು, 9.49‌ ಲಕ್ಷ ವೀಕ್ಷಕರನ್ನು ಪಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...