alex Certify ಕಾಡುಪ್ರಾಣಿಗಳ ಸಂಚಾರಕ್ಕೆಂದೇ ಪ್ರತ್ಯೇಕ ಸೇತುವೆ ನಿರ್ಮಿಸಿದೆ ಅಮೆರಿಕದ ಈ ರಾಜ್ಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಡುಪ್ರಾಣಿಗಳ ಸಂಚಾರಕ್ಕೆಂದೇ ಪ್ರತ್ಯೇಕ ಸೇತುವೆ ನಿರ್ಮಿಸಿದೆ ಅಮೆರಿಕದ ಈ ರಾಜ್ಯ..!

ಅಮೆರಿಕದ ಉತಾಹ್​ ಎಂಬಲ್ಲಿ ಪ್ರತಿ ವರ್ಷ 6000 ದಿಂದ 10000 ದಷ್ಟು ಜಿಂಕೆಗಳು ಸಾವನ್ನಪ್ಪುತ್ತಿವೆ ಎಂಬ ಭಯಾನಕ ಅಂಶ ಅಧ್ಯಯನವೊಂದರಲ್ಲಿ ಹೊರಬಿದ್ದಿದೆ. ಕಳೆದ 5 ವರ್ಷಗಳಲ್ಲಿ ಸುಮಾರು 14700ಕ್ಕೂ ಹೆಚ್ಚು ಜಿಂಕೆಗಳು ವಾಹನ ಅಪಘಾತದಲ್ಲಿ ಮೃತಪಟ್ಟಿವೆ.

ಜಿಂಕೆಗಳು ಅಪಘಾತದಿಂದ ಸಾವಿಗೀಡಾಗೋದನ್ನ ತಪ್ಪಿಸುವ ಸಲುವಾಗಿ ಉತಾಹ್​ನ ಅಧಿಕಾರಿಗಳು ಒಂದು ಸೇತುವೆ ನಿರ್ಮಾಣ ಮಾಡುವ ಮೂಲಕ ಹೊಸ ಮಾರ್ಗವನ್ನ ರೂಪಿಸಿದೆ.

ಪಾರ್ಲಿಸ್​ ಕಣಿವೆಯಲ್ಲಿ ವನ್ಯಜೀವಿ ಸಂಪನ್ಮೂಲ ಇಲಾಖೆ ಅಂತರ್​ರಾಜ್ಯ ರಸ್ತೆ 80ಕ್ಕೆ ಅಡ್ಡಲಾಗಿ 2018ರಲ್ಲಿ ಸೇತುವೆ ನಿರ್ಮಾಣ ಮಾಡಿತ್ತು. ಈ ಸೇತುವೆಯನ್ನ ಕಾಡು ಪ್ರಾಣಿಗಳು ಬಳಕೆ ಮಾಡುತ್ತಿವೆ ಎಂಬುದಕ್ಕೆ ಸಾಕ್ಷಿಯಾಗಿ ಉತಾಹ್​ ಸಾರಿಗೆ ಇಲಾಖೆ ವಿಡಿಯೋವೊಂದನ್ನ ಬಿಡುಗಡೆ ಮಾಡಿದೆ.

ಅಧಿಕೃತ ಫೇಸ್​ಬುಕ್​ ಖಾತೆಯಲ್ಲಿ ಉತಾಹ್​​ ಸಾರಿಗೆ ಇಲಾಖೆ ವಿಡಿಯೋ ಬಿಡುಗಡೆ ಮಾಡಿದ್ದು ಇದರಲ್ಲಿ ಮುಳ್ಳು ಹಂದಿ, ಮೂಸ್​ಗಳು, ಜಿಂಕೆ. ಕರಡಿ ಸೇರಿದಂತೆ ಹಲವು ಪ್ರಾಣಿಗಳು ಸೇತುವೆ ಮೇಲೆ ನಡೆದುಕೊಂಡು ಹೋಗೋದನ್ನ ನೋಡಬಹುದಾಗಿದೆ.

Parleys Canyon Wildlife Overpass 2020

It's working! Thanks to the Utah Department of Transportation and Utah State University for monitoring the Parley's Canyon wildlife overpass this year. As you can see, the 2nd year of this overpass has been successful at helping wildlife safely migrate over busy Interstate 80 and helping motorists be much safer as well. Please keep off of this overpass. Thanks!

Posted by Utah Division of Wildlife Resources on Tuesday, November 17, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...