alex Certify ವಿಭಿನ್ನ ದಶಕಗಳಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಭಿನ್ನ ದಶಕಗಳಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

US Woman Delivers Triplets in Different Decades, Sets New World Record

ವಿನೂತನ ದಾಖಲೆಯೊಂದನ್ನು ನಿರ್ಮಾಣ ಮಾಡಿರುವ ಅಮೆರಿಕದ ಮಹಿಳೆಯೊಬ್ಬರು ಐದು ದಿನಗಳ ಅಂತರದಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮವಿತ್ತಿದ್ದಾರೆ. ಅಚ್ಚರಿಯ ವಿಚಾರವೆಂದರೆ ಈ ತ್ರಿವಳಿ ಮಕ್ಕಳು ವಿಭಿನ್ನ ದಶಕಗಳಲ್ಲಿ ಜನಿಸಿವೆ.

ಡಿಸೆಂಬರ್‌ 28, 2019ರಲ್ಲಿ ಮೊದಲ ಮಗುವಿಗೆ ಜನ್ಮವಿತ್ತ ಕೈಲಿ ಡೆಶಾನೆಗೆ ಮಿಕ್ಕ ಎರಡು ಮಕ್ಕಳು ಜನವರಿ 2, 2020ರಲ್ಲಿ ಜನಿಸಿವೆ. ಈ ಮೂಲಕ ತ್ರಿವಳಿಗಳ ಜನನದ ನಡುವಿನ ಅಂತರದ ಹಿಂದಿನ ದಾಖಲೆಯನ್ನು ಮುರಿದ ಕೈಲಿಗೆ ಅವಧಿಪೂರ್ವ ಡೆಲಿವರಿಯಾಗಿ 22 ವಾರಗಳಲ್ಲಿ ಮಕ್ಕಳು ಜನಿಸಿವೆ.

SBI ಗ್ರಾಹಕರಿಗೆ ಬಿಗ್ ಶಾಕ್: ಮಿತಿ ನಂತ್ರ ಪ್ರತಿ ವಿತ್ ಡ್ರಾಗೆ 15 ರೂ. ಶುಲ್ಕದ ಜೊತೆ GST ಹೊರೆ

ಅವಧಿಪೂರ್ವ ಹೆರಿಗೆ ಕಾರಣದಿಂದ ಮೊದಲ ಮಗು ಬದುಕುಳಿಯುವ ಸಾಧ್ಯತೆ 10%ಗಿಂತ ಕಡಿಮೆ ಇತ್ತು. ಆದೃಷ್ಟವಶಾ‌ತ್‌ ಎಲ್ಲಾ ಮೂರು ಮಕ್ಕಳು — ರೋವನ್, ಡೆಕ್ಲನ್ ಹಾಗೂ ಸಿಯಾನ್‌‌ಗೆ ಈಗ 17 ತಿಂಗಳು ತುಂಬಿದ್ದು, ಅವರೆಲ್ಲಾ ಆರೋಗ್ಯವಾಗಿದ್ದಾರೆ. ಮೊದಲ ಮಗು ಅಷ್ಟು ಬೇಗ ಜನಿಸಿದ ಕಾರಣ ಇನ್ನಿಬ್ಬರು ಮಕ್ಕಳನ್ನು ಗರ್ಭದೊಳಗೇ ಇರಿಸಲು ವೈದ್ಯರು ನಿರ್ಧರಿಸಿದ್ದರು.

ಪ್ರಶ್ನೆ ನೀವೇ ಸೆಟ್ ಮಾಡಿಕೊಂಡು, ಉತ್ತರ ಬರೆಯಿರಿ ಎಂದ ಐಐಟಿ ಗೋವಾ…!

ಆದರೆ ಐದು ದಿನಗಳ ಬಳಿಕ ಕೈಲಿಗೆ ಮತ್ತೆ ಪ್ರಸವವಾಗಿ, ಜನವರಿ 2, 2020ರಲ್ಲಿ ಇನ್ನಿಬ್ಬರು ಮಕ್ಕಳಿಗೆ ಜನ್ಮವಿತ್ತಿದ್ದಾರೆ. ಹೀಗಾಗಿ ತ್ರಿವಳಿಗಳು ಎರಡು ಭಿನ್ನ ದಶಕಗಳಲ್ಲಿ ಜನಿಸಿವೆ.

ನಾಲ್ಕು ವರ್ಷಗಳ ಮಟ್ಟಿಗೆ ಮಕ್ಕಳನ್ನು ಮಾಡಿಕೊಳ್ಳುವ ತಮ್ಮ ಪ್ರಯತ್ನ ಫಲಗೂಡದೇ ಇದ್ದಾಗ ಕೈಲಿ ಹಾಗೂ ಆಕೆಯ ಪತಿ ಬ್ರಾಡನ್ ಇನ್‌ವಿಟ್ರೋ ಫರ್ಟಿಲೈಜೇಷನ್‌ ಮೂಲಕ ಮಕ್ಕಳನ್ನು ಪಡೆಯುವ ನಿರ್ಧಾರಕ್ಕೆ ಬಂದಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...