alex Certify ಸಾರ್ವಜನಿಕ ಸ್ಥಳದಲ್ಲಿ ಮೂರು ಬಾರಿ ಎಡವಿ ಬಿದ್ದ ಅಮೆರಿಕ ಅಧ್ಯಕ್ಷ ಬಿಡೆನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕ ಸ್ಥಳದಲ್ಲಿ ಮೂರು ಬಾರಿ ಎಡವಿ ಬಿದ್ದ ಅಮೆರಿಕ ಅಧ್ಯಕ್ಷ ಬಿಡೆನ್

ಅಮೆರಿಕ ಅಧ್ಯಕ್ಷ ಜೋ ಬಿಡೆನ್​​ರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ಈ ವಿಡಿಯೋದಲ್ಲಿ  ಜೋ ಬಿಡೆನ್​ ವಿಮಾನದ ಮೆಟ್ಟಿಲನ್ನ ಹತ್ತುವ ವೇಳೆ ಎಡವಿ ಬೀಳುವಂತಾದ ದೃಶ್ಯವನ್ನ ನೀವು ನೋಡಬಹುದಾಗಿದೆ.

ವೈರಲ್​ ಆದ ಈ ವಿಡಿಯೋದಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್​ ಮೂರು ಬಾರಿ ಮೆಟ್ಟಿಲಿನಿಂದ ಆಯ ತಪ್ಪಿರೋದನ್ನ ಕಾಣಬಹುದಾಗಿದೆ. ಕೂಡಲೇ ತಮ್ಮನ್ನ ತಾವು ಸಂಭಾಳಿಸಿಕೊಳ್ಳುವಲ್ಲಿ ಬಿಡೆನ್​ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಬಿಡೆನ್​ಗೆ ಯಾವುದೇ ಗಾಯಗಳಾಗಿಲ್ಲ.

ವಿಮಾನದ ಮೆಟ್ಟಿಲುಗಳಲ್ಲಿ ಬಿಡೆನ್​ ಮೂರು ಬಾರಿ ಎಡವಿದ್ದಾರೆ. ಬಿದ್ದ ಬಳಿಕ ಎರಡು ಬಾರಿ ಬಿಡೆನ್​ ಕೈ ಸಹಾಯದಿಂದ ಎದ್ದಿದ್ದಾರೆ. ಮೂರನೇ ಬಾರಿ ಮೊಣಕಾಲೂರಿ ಬಿದ್ದಿದ್ದಾರೆ. ವಿಮಾನವನ್ನ ಹತ್ತಿದ್ದ ಬಳಿಕ ಸೆಲ್ಯೂಟ್​ ಮಾಡಿ ವಿಮಾನದ ಒಳಕ್ಕೆ ಹೋಗಿದ್ದಾರೆ. ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜಿನ್ ಪಿಯರೇ ಜೋ ಬಿಡೆನ್​ ಕ್ಷೇಮವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮೆಟ್ಟಿಲನ್ನ ಹತ್ತುತ್ತಿದ್ದ ವೇಳೆಯ ಜೋರಾಗಿ ಗಾಳಿ ಬೀಸುತ್ತಿತ್ತು. ಹೀಗಾಗಿ 78 ವರ್ಷದ ಜೋ ಬಿಡೆನ್​ ಆಯತಪ್ಪಿದ್ದಾರೆ ಎನ್ನಲಾಗಿದೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...