alex Certify ದಂಗಾಗಿಸುತ್ತೆ ಒಂದು ಬಿಯರ್‌ ಖರೀದಿಸಿದವನು ನೀಡಿದ ಟಿಪ್ಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ಒಂದು ಬಿಯರ್‌ ಖರೀದಿಸಿದವನು ನೀಡಿದ ಟಿಪ್ಸ್…!

ರೆಸ್ಟೋ ರೆಂಟ್​​ನಲ್ಲಿ ಒಂದೇ ಒಂದು ಬೀರ್​ ಖರೀದಿ ಮಾಡಿದ್ದ ಅಮೆರಿಕದ ಗ್ರಾಹಕನೊಬ್ಬ ಬರೋಬ್ಬರಿ 2,21,950.50 ರೂಪಾಯಿಗಳನ್ನ ಟಿಪ್ಸ್ ರೂಪದಲ್ಲಿ ನೀಡಿದ್ದಾನೆ. ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ರೆಸ್ಟೋ ರೆಂಟ್​ ಕೊಂಚ ಚೇತರಿಸಿಕೊಳ್ಳಲಿ ಅಂತಾ ಗ್ರಾಹಕ ಈ ದೇಣಿಗೆ ನೀಡಿದ್ದಾನೆ.

ಒಹಿಯೋದ ಕ್ಲೀವ್​ಲ್ಯಾಂಡ್​​ನ ವ್ಯಕ್ತಿಯೊಬ್ಬರು ಬೀರ್​ಗೆ ಆರ್ಡರ್​ ಮಾಡಿದ್ದರು. ನಾವು ಬಿಲ್​ ಪಾವತಿ ಮಾಡಿ ಎಂದಾಗ ಅವರು ನೀಡಿದ ಚೆಕ್​ ನೋಡಿ ನಮಗೆ ಹೆಚ್ಚುವರಿ ಹಣ ನೀಡಿದ್ದಾರೆ ಎಂಬ ಅಂಶ ಗೊತ್ತಾಯ್ತು ಅಂತಾ ರೆಸ್ಟೋ ರೆಂಟ್​ ಮಾಲೀಕ ಬ್ರೆಂಡಾನ್​ ರಿಂಗ್​ ಫೇಸ್ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ಟಿಪ್​ ನೀಡಿದ ವ್ಯಕ್ತಿ ರೆಸ್ಟೋ ರೆಂಟ್ ​ಗೆ ಶುಭವಾಗಲಿ ಎಂದು ಹಾರೈಸಿದ್ದು ಮಾತ್ರವಲ್ಲದೇ, ಆ ವೇಳೆಯಲ್ಲಿ ರೆಸ್ಟೋ ರೆಂಟ್​ ನಲ್ಲಿ ಕೆಲಸ ಮಾಡುತ್ತಿದ್ದ 4 ಮಂದಿ ಸಿಬ್ಬಂದಿಗೂ ಟಿಪ್ಸ್​ನಲ್ಲಿ ಪಾಲು ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಅಷ್ಟು ದೊಡ್ಡ ಮೊತ್ತದ ಟಿಪ್ಸ್ ಕಂಡ ಮಾಲೀಕ ಗ್ರಾಹಕರ ಹಿಂದೆಯೇ ಓಡಿದ್ದಾರೆ. ಆ ವೇಳೆ ಗ್ರಾಹಕ ನಾನು ತಪ್ಪಾಗಿ ಈ ಹಣವನ್ನ ನೀಡಿಲ್ಲ. ನಿಮ್ಮ ರೆಸ್ಟೋ ರೆಂಟ್​ ಪುನಾರಂಭವಾಗುತ್ತಿದ್ದಂತೆ ಮತ್ತೊಮ್ಮೆ ಭೇಟಿಯಾಗೋಣ ಎಂದು ಹೇಳಿದ್ದಾರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...