alex Certify ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಪನ್ನೀರ್​ ಟಿಕ್ಕಾಗೂ ಇದೆ ಲಿಂಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಪನ್ನೀರ್​ ಟಿಕ್ಕಾಗೂ ಇದೆ ಲಿಂಕ್​..!

2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಏನಾಗುತ್ತೆ ಎಂಬ ಕಾತುರತೆ ಮನೆ ಮಾಡಿರುವ ಬೆನ್ನಲ್ಲೇ ಟ್ವಿಟರ್​ನಲ್ಲಿ ಹೊಸದೊಂದು ಅಚ್ಚರಿ ಕಾಣಸಿಕ್ಕಿದೆ. ಡೊನಾಲ್ಡ್ ಟ್ರಂಪ್​, ಜೋ ಬಿಡೆನ್​ ಹಾಗೂ ಕಮಲಾ ಹ್ಯಾರೀಸ್​ ಹೆಸರುಗಳ ಜೊತೆ ಭಾರತೀಯ ಖಾದ್ಯ ಪನ್ನೀರ್​ ಟಿಕ್ಕಾ ಹೆಸರು ತಳಕು ಹಾಕಿಕೊಂಡಿದೆ.

ಬಳಿಕ ಇದು ಇಂಡಿಯನ್​ ಅಮೆರಿಕನ್​ ಮಹಿಳೆ ಪ್ರಮೀಳಾ ಜಯಪಾಲ್​ರ ಟ್ವೀಟ್​ನಿಂದ ಆದ ಕೆಲಸ ಅನ್ನೋದು ಗೊತ್ತಾಗಿದೆ. ಡೆಮಾಕ್ರಟಿಕ್​ ಪಕ್ಷದ ಉಪಾಧ್ಯಕ್ಷೆ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್​ ಕೆಲ ದಿನಗಳ ಹಿಂದಷ್ಟೇ ತನಗೆ ಉತ್ತರ ಭಾರತದ ಎಲ್ಲಾ ರೀತಿಯ ಟಿಕ್ಕಾ ಖಾದ್ಯ ಇಷ್ಟ ಅಂತಾ ಹೇಳಿಕೊಂಡಿದ್ರು. ಹೀಗಾಗಿ ಮನೆಯಲ್ಲಿ ಮಖಾನಿ ತಿನಿಸನ್ನ ತಯಾರಿಸಿದ ಪ್ರಮೀಳಾ ಅದಕ್ಕೇ ಪನ್ನೀರ್​ ಟಿಕ್ಕಾ ಎಂಬ ಹೆಸರನ್ನ ನೀಡಿ ಬಿಡೆನ್​ ಹಾಗೂ ಹ್ಯಾರೀಸ್​ಗೆ ಮತ ಹಾಕಿ ಅಂತಾ ಮನವಿ ಮಾಡಿದ್ದರು.

ಈ ರೀತಿ ಯಾವುದೋ ಆಹಾರ ಪದಾರ್ಥಗೆ ಇನ್ಯಾವುದೋ ಹೆಸರು ಕೊಟ್ಟಿದ್ದನ್ನ ಕಂಡ ಭಾರತೀಯರು ಟ್ವಿಟರ್​ನಲ್ಲಿ ತಿಂಡಿಗಳಿಗೆ ತಪ್ಪು ತಪ್ಪಾದ ಹೆಸರನ್ನ ನೀಡಿ ಪೋಸ್ಟ್ ಮಾಡುವ ಮೂಲಕ ಪ್ರಮೀಳಾ ಜಯಪಾಲ್​ರ ಕಾಲೆಳೆಯುತ್ತಿದ್ದಾರೆ.

— Pramila Jayapal (@PramilaJayapal) November 3, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...