alex Certify ಒಬಾಮಾ ದಂಪತಿಯನ್ನು ನಕಲು ಮಾಡಿದ ಪುಟಾಣಿ ಮಕ್ಕಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಬಾಮಾ ದಂಪತಿಯನ್ನು ನಕಲು ಮಾಡಿದ ಪುಟಾಣಿ ಮಕ್ಕಳು

ಅಮೆರಿಕ ಅಧ್ಯಕ್ಷ ಜೋ ಬಿಡೆನ್​ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​ರ ಪದಗ್ರಹಣ ಕಾರ್ಯಕ್ರಮದ ವೇಳೆ ಬರಾಕ್​ ಒಬಾಮಾ ಹಾಗೂ ಮಿಶೆಲ್​ ಒಬಾಮಾ ಧರಿಸಿದ್ದ ಉಡುಗೆ ಹೇಗಿತ್ತು ಅನ್ನೋದು ನಿಮಗೆ ನೆನಪಿರಬಹುದು. ಬರಾಕ್​ ಒಬಾಮಾ ಕಪ್ಪು ಬಣ್ಣದ ಲಾಂಗ್​ ಸೂಟ್​ ಧರಿಸಿದ್ದರೆ ಮಿಶೆಲ್​ ಒಬಾಮಾ ನೇರಳೆ ಶೇಡ್​ನ ಲಾಂಗ್​ ಸೂಟ್​ ಧರಿಸಿದ್ದರು. ಈ ಜೋಡಿಯ ಉಡುಗೆ ಸಾಕಷ್ಟು ವಿಚಾರಗಳಿಂದ ಸುದ್ದಿಯಾಗಿತ್ತು.

ಆದರೆ ಈಗ ಇದೇ ತರಹನಾದ ಉಡುಪನ್ನ ಇಬ್ಬರು ಮುದ್ದಾದ ಮಕ್ಕಳು ಧರಿಸಿದ್ದು ಮಿಶೆಲ್​ ಹಾಗೂ ಬರಾಕ್​ ಒಬಾಮಾರಂತೆಯೇ ಕ್ಯಾಮರಾ ಕಣ್ಣಿಗೆ ಪೋಸ್​ ನೋಡಿದ್ದಾರೆ. ಈ ಮಕ್ಕಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಎಷ್ಟರ ಮಟ್ಟಿಗೆ ಸದ್ದು ಮಾಡಿದೆ ಅಂದ್ರೆ ಸ್ವತಃ ಮಿಶೆಲ್​ ಒಬಾಮಾ ಮುದ್ದಾದ ಮಕ್ಕಳ ಫೋಟೋವನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಖಾತೆಯಲ್ಲಿ ಶೇರ್​ ಮಾಡಿದ್ದಾರೆ.

ಇನ್​ಸ್ಟಾಗ್ರಾಂನ ಮಕ್ಕಳ 5 ಫೋಟೋಗಳನ್ನ ಶೇರ್​ ಮಾಡಿದ ಮಿಶೆಲ್​ ಒಬಾಮಾ, ರೈಲೇಗ್​ ಹಾಗೂ ಜಾಯ್ಡನ್​ ನೀವಿಬ್ಬರು ಸರಿಯಾಗಿ ರೆಡಿಯಾಗಿದ್ದೀರಾ ಎಂದು ಹೊಗಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...