alex Certify ಅಪಾರ್ಟ್​ಮೆಂಟ್​ ಮಾರಾಟಕ್ಕೆ ಮುಂದಾದ ಅಮೆರಿಕ ಉಪಾಧ್ಯಕ್ಷೆ ಕಮಲಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಾರ್ಟ್​ಮೆಂಟ್​ ಮಾರಾಟಕ್ಕೆ ಮುಂದಾದ ಅಮೆರಿಕ ಉಪಾಧ್ಯಕ್ಷೆ ಕಮಲಾ

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ 17 ವರ್ಷಗಳ ಕಾಲ ಒಡೆತನ ಹೊಂದಿದ್ದ ಸ್ಯಾನ್​ ಫ್ರಾನ್ಸಿಸ್ಕೋ ಮನೆಯನ್ನ ಮಾರಾಟ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಆಸ್ತಿಗೆ ಮಾರುಕಟ್ಟೆಯಲ್ಲಿ 7.9 ಲಕ್ಷ ಡಾಲರ್​ ಮೌಲ್ಯ ಇದೆ ಎಂದು ಅಂದಾಜಿಸಲಾಗಿದೆ.

ಈ ಸ್ಯಾನ್​ ಫ್ರಾನ್ಸಿಸ್ಕೋ ಮನೆ ಎತ್ತರದ ಮೇಲ್ಚಾವಣಿ, ಕಚೇರಿ ವ್ಯವಸ್ಥೆ, ಸಣ್ಣ ಹೊರಾಂಗಣ, ಮಲಗುವ ಕೋಣೆ, ಸ್ನಾನಗೃಹ ಸೇರಿದಂತೆ ಐಷಾರಾಮಿ ಸೌಲಭ್ಯಗಳನ್ನ ಹೊಂದಿದೆ.

RSS ಬಗ್ಗೆ ಟೀಕೆ, ದೇಶ ವಿರೋಧಿ ಹೇಳಿಕೆ: PFI ಸಂಘಟನೆ ನಾಯಕರಿಗೆ ಬಿಗ್ ಶಾಕ್

2004ರಲ್ಲಿ ಸ್ಯಾನ್​ ಫ್ರಾನ್ಸಿಸ್ಕೋದ ಜಿಲ್ಲಾ ವಕೀಲರಾಗಿದ್ದ ವೇಳೆ ಕಮಲಾ ಹ್ಯಾರಿಸ್​ ಈ ಅಪಾರ್ಟ್​ಮೆಂಟ್​ನ್ನು 489000 ಡಾಲರ್​ ಮೌಲ್ಯಕ್ಕೆ ಖರೀದಿ ಮಾಡಿದ್ದರು.

ಪ್ರಸ್ತುತ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಬ್ಲೇರ್​ ಹೌಸ್​ನಲ್ಲಿ ತಾತ್ಕಾಲಿಕವಾಗಿ ವಾಸಿಸುತ್ತಿದ್ದಾರೆ. ಇವರ ಅಧಿಕೃತ ನಿವಾಸ ಶ್ವೇತ ಭವನದ ಸಮೀಪದಲ್ಲೇ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...