alex Certify ಸಮಿತಿ ಸಭೆಯಲ್ಲಿ ತಲೆಕೆಳಗಾಗಿ ಕಾಣಿಸಿದ ಜನಪ್ರತಿನಿಧಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮಿತಿ ಸಭೆಯಲ್ಲಿ ತಲೆಕೆಳಗಾಗಿ ಕಾಣಿಸಿದ ಜನಪ್ರತಿನಿಧಿ…!

ಕೆಲ ದಿನಗಳ ಹಿಂದಷ್ಟೇ ಜೂಮ್​ ಮೀಟಿಂಗ್​ ವೇಳೆಯಲ್ಲಿ ವಕೀಲರೊಬ್ಬರ ಮುಖಕ್ಕೆ ಬೆಕ್ಕಿನ ಫಿಲ್ಟರ್​​ ಬಂದಿದ್ದ ವಿಡಿಯೋವನ್ನ ನೀವು ನೋಡಿರಬಹುದು. ಸಾಮಾಜಿಕ ಮಾಧ್ಯಮದಲ್ಲಿ ಈ ಫನ್ನಿ ವಿಡಿಯೋ ಸಖತ್​ ಸದ್ದು ಮಾಡಿತ್ತು.

ನ್ಯಾಯಾಧೀಶರು ನೀವು ಫಿಲ್ಟರ್​ ಆಯ್ಕೆಯನ್ನ ಆನ್​ ಮಾಡಿದ್ದೀರಿ ಎನಿಸುತ್ತೆ ಎಂದು ಹೇಳಿದ ಕೂಡಲೇ ವಕೀಲ ನಾನು ಬೆಕ್ಕು ಅಲ್ಲ. ನಾನು ನಿಜವಾಗಿಯೂ ಸಭೆಯಲ್ಲಿ ಹಾಜರಿದ್ದೇನೆ ಎಂದು ಹೇಳಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದರು.

ಇದೇ ರೀತಿಯ ಇನ್ನೊಂದು ಘಟನೆಗೆ ಮಿನ್ನೆಸೋಟಾದ ರಿಪಬ್ಲಿಕನ್​ ಪ್ರತಿನಿಧಿ ಟಾಮ್​ ಎಮ್ಮರ್​ ಸಾಕ್ಷಿಯಾಗಿದ್ದಾರೆ. ವರ್ಚುವಲ್​ ಹೌಸ್​ ಫೈನಾನ್ಶಿಯಲ್​ ಸರ್ವಿಸ್​ ಕಮಿಟಿ ಸಭೆಯಲ್ಲಿ ಟಾಮ್​ ಎಮ್ಮರ್​​ ಸಮಿತಿ ಉದ್ದೇಶಿಸಿ ಮಾತನಾಡುತ್ತಿರುವ ವೇಳೆ ಅವರ ಮುಖ ತಲೆಕೆಳಗಾಗಿ ಕಂಡಿದೆ.

ಮೆದುಳಿಗೆ ಕೆಲಸ ನೀಡುತ್ತೆ ಈಗ ತಲೆ ಎತ್ತಿರೋ ಹೊಸ ವಸ್ತು ಸಂಗ್ರಹಾಲಯ..!

ವಿಡಿಯೋದಲ್ಲಿ ಎಮ್ಮರ್​ ಇದನ್ನ ಹೇಗೆ ಸರಿಪಡಿಸಬೇಕು ಎಂದು ಹೇಳೊದನ್ನ ಕಾಣಬಹುದಾಗಿದೆ. ಅದಕ್ಕೆ ಒಬ್ಬ ಮಹಳೆ ಕನಿಷ್ಟ ಇವರು ಬೆಕ್ಕಲ್ಲ ಎಂದು ಉತ್ತರ ನೀಡಿದ್ದಾರೆ.

ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಅಪ್​ಲೋಡ್​ ಮಾಡಿದ ಟಾಮ್​ ಎಮ್ಮರ್​ ನಾನು ಬೆಕ್ಕಲ್ಲ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಸಖತ್​ ವೈರಲ್​ ಆಗಿದೆ.

— Tom Emmer (@RepTomEmmer) February 10, 2021

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...