alex Certify 200 ರೂ. ಊಟಕ್ಕಾಗಿ 2 ಲಕ್ಷ ರೂಪಾಯಿ ದಂಡ ತೆತ್ತ ವೃದ್ದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

200 ರೂ. ಊಟಕ್ಕಾಗಿ 2 ಲಕ್ಷ ರೂಪಾಯಿ ದಂಡ ತೆತ್ತ ವೃದ್ದ

ಮೊಮ್ಮಗನಿಗೆ ಒಂದೊಳ್ಳೆ ಊಟವನ್ನ ಕೊಡಿಸಬೇಕು ಅಂತಾ ಪ್ಲಾನ್​ ಮಾಡಿದ ತಾತ ಮೆಕ್​ಡೊನಾಲ್ಡ್​​ಗೆ ಭಾರೀ ಮೊತ್ತದ ಹಣ ಖರ್ಚು ಮಾಡಿದ್ದಾನೆ.

ಜಾನ್​ ಬಾಬೇಜ್​​ ತಮ್ಮ ಮೊಮ್ಮಗ ಟೈಲರ್​ಗಾಗಿ 200 ರೂಪಾಯಿ ಆಹಾರವನ್ನ ಮೆಕ್​ಡೊನಾಲ್ಡ್​​ನಲ್ಲಿ ಖರೀದಿಸಿದ್ದರು. ಆದರೆ ಈ ತಾತನಿಗೆ ಪಾರ್ಕಿಂಗ್​ ದಂಡ ಸೇರಿದಂತೆ 2 ಲಕ್ಷ ರೂಪಾಯಿ ದಂಡ ತೆತ್ತಬೇಕಾದ ಪರಿಸ್ಥಿತಿ ಎದುರಾಗಿದೆ.

75 ವರ್ಷದ ವೃದ್ಧ ಪಾರ್ಕಿಂಗ್​ ನಿಲ್ದಾಣದಲ್ಲಿ ಕೇವಲ 17 ನಿಮಿಷ ಹೆಚ್ಚುವರಿ ಸಮಯ ಕಳೆದಿದ್ದಾರೆ. 2 ಗಂಟೆಗಳ ಕಾಲ ಇಲ್ಲಿ ಪಾರ್ಕಿಂಗ್​ಗೆ ಯಾವುದೇ ಶುಲ್ಕವಿರಲಿಲ್ಲ. ಆದರೆ ಕಾರಿನಲ್ಲೇ ನಿದ್ದೆ ಹೋಗಿದ್ದ ವೃದ್ಧ 17 ನಿಮಿಷ ಹೆಚ್ಚುವರಿಯಾಗಿ ಉಳಿದು ಬಿಟ್ಟಿದ್ದಾರೆ. ಈ ಸಮಯದಲ್ಲಿ ವೃದ್ಧನ ಮೊಮ್ಮಗ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ. ತಾತ – ಮೊಮ್ಮಗರಿಬ್ಬರಿಗೂ ಪಾರ್ಕಿಂಗ್​ ಶುಲ್ಕದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.

ಅಸ್ತಿತ್ವದಲ್ಲಿದ್ದ ವಿಳಾಸಕ್ಕೆ ನೋಟಿಸ್​ ಕಳುಹಿಸಿದ್ದರಿಂದ ಈಗಾಗಲೇ ದಂಡವನ್ನ ಪಾವತಿ ಮಾಡಿದ್ದಾರೆ. ಡಿಸಿಬಿಎಲ್​ ಅಧಿಕಾರಿಗಳು ಮನೆಗೆ ಬಂದು 145327.77 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...