alex Certify ಬೆರಗಾಗಿಸುತ್ತೆ ಈ ಹೆಣ್ಣು ಪಾರಿವಾಳದ ದುಬಾರಿ ಬೆಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಈ ಹೆಣ್ಣು ಪಾರಿವಾಳದ ದುಬಾರಿ ಬೆಲೆ…!

ಬೆಲ್ಜಿಯಂನ ಪಾರಿವಾಳ ರೇಸಿಂಗ್​​ನಲ್ಲಿ ಭಾಗಿಯಾಗುವ ನ್ಯೂ ಕಿಮ್​ ಹೆಸರಿನ ಹೆಣ್ಣು ಪಾರಿವಾಳ ಬರೋಬ್ಬರಿ 1.9 ಮಿಲಿಯನ್(141,523,970.00 ರೂ.)​ ಡಾಲರ್​ ಗೆ ಹರಾಜಾಗಿದೆ.

ರೇಸಿಂಗ್​ ಪರಿವಾಳಗಳನ್ನ ಹರಾಜು ಮಾಡುವ ಬೆಲ್ಜಿಯಂನ ಪಿಪಾದಲ್ಲಿ ನಡೆದ 2 ದಿನಗಳ ಹರಾಜು ಕಾರ್ಯಕ್ರಮದಲ್ಲಿ ಚೀನಾ ಮೂಲದ ಖರೀದಿದಾರರೊಬ್ಬರು ಈ ಪಾರಿವಾಳವನ್ನ ಖರೀದಿ ಮಾಡಿದ್ದಾರೆ. ಈ ಮೂಲಕ ಕಳೆದ ವರ್ಷ 1.25 ಮಿಲಿಯನ್​ ಯುರೋಗೆ ಮಾರಾಟವಾಗಿದ್ದ ಆರ್ಮಡೋ ಎಂಬ ಗಂಡು ಪಾರಿವಾಳದ ದಾಖಲೆ ಮುರಿದು ಬಿದ್ದಿದೆ.

ಪಾರಿವಾಳಗಳ ಹರಾಜು ಪ್ರಕ್ರಿಯೆಯಲ್ಲಿ ಇದೊಂದು ವಿಶ್ವ ದಾಖಲೆ ಎಂದು ನನಗನಿಸುತ್ತಿದೆ. ಈ ಹೆಣ್ಣು ಪಾರಿವಾಳ ಇಷ್ಟೊ ದೊಡ್ಡ ಮೊತ್ತಕ್ಕೆ ಮಾರಾಟವಾಗುತ್ತೆ ಎಂದು ನಾವು ಭಾವಿಸಿರಲಿಲ್ಲ. ಬಹುಶಃ ಚೀನಿ ಮೂಲದ ಖರೀದಿದಾರರು ಪಾರಿವಾಳದ ಸಂತಾನೋತ್ಪತ್ತಿ ಮಾಡ್ತಾರೆ ಎಂದೆನಿಸುತ್ತೆ ಅಂತಾ ಪಿಪಾ ಅಧ್ಯಕ್ಷ ನಿಕೋಲಾಸ್​​ ಗಿಸೆಲ್ಖ್ರೆಕ್​ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...