alex Certify ಮೌಂಟ್​ ಎವರೆಸ್ಟ್​ ಶಿಖರ ಏರಿದ್ದ ಇಬ್ಬರು ಪರ್ವತಾರೋಹಿಗಳು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೌಂಟ್​ ಎವರೆಸ್ಟ್​ ಶಿಖರ ಏರಿದ್ದ ಇಬ್ಬರು ಪರ್ವತಾರೋಹಿಗಳು ಸಾವು

ಅಮೆರಿಕ ಹಾಗೂ ಸ್ವಿಡ್ಜರ್​ಲ್ಯಾಂಡ್​​ನ ಇಬ್ಬರು ಪರ್ವತಾರೋಹಿಗಳು ಮೌಂಟ್​ ಎವರೆಸ್ಟ್​ ಶಿಖರದಲ್ಲಿ ಸಾವನ್ನಪ್ಪಿದ್ದಾರೆ. ಇದು ಮೌಂಟ್​​ ಎವರೆಸ್ಟ್​​ನಲ್ಲಿ ವರದಿಯಾದ ಈ ವರ್ಷದ ಮೊದಲ ಸಾವಾಗಿದೆ ಎಂದು ನೇಪಾಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬುಧವಾರ ಇಬ್ಬರು ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ ಎಂದು ಸೆವೆನ್​​ ಸಮಿಟ್ ಟ್ರೆಕ್​​ನ ಮಿಂಗ್ಮಾ ಶೆರ್ಪಾ ಮಾಹಿತಿ ನೀಡಿದ್ರು. ಸ್ವಿಡ್ಜರ್​ಲ್ಯಾಂಡ್​ನ ಪರ್ವತಾರೋಹಿ ಶಿಖರವನ್ನ ತಲುಪಿದ ಬಳಿಕ ಸಾವನ್ನಪ್ಪಿದ್ರು. ಅವರು ಆಯಾಸದಿಂದ ಬಳಲುತ್ತಿದ್ದರು ಎಂದು ಇದೇ ಸಂಘಟನೆಯ ಚಾಂಗ್​ ದವಾ ಶೆರ್ಪಾ ಹೇಳಿದ್ದಾರೆ.

ನಾವು ಎರಡು ಹೆಚ್ಚುವರಿ ಶೆರ್ಪಾಗಳ ಕೈಯಲ್ಲಿ ವೈದ್ಯಕೀಯ ಆಮ್ಲಜನಕ ಹಾಗೂ ಆಹಾರವನ್ನ ಕೊಟ್ಟು ಕಳಿಸಿದ್ದೆವು. ಆದರೂ ಸಹ ಪರ್ವತಾರೋಹಿಯನ್ನ ಉಳಿಸಲು ಸಾಧ್ಯವಾಗಲಿಲ್ಲ ಎಂದು ಚಾಂಗ್​​ ಹೇಳಿದ್ದಾರೆ.

ಇನ್ನು ಅಮೆರಿಕದ ಪರ್ವತಾರೋಹಿ ಕೂಡ ಹಿಮ ಕುರುಡುತನ ಹಾಗೂ ಆಯಾಸದಿಂದ ಬಳಲುತ್ತಿದ್ದರು. ಕ್ಯಾಂಪ್​ 4ನ್ನು ತಲುಪಿದ್ದ ಪರ್ವತಾರೋಹಿ ಬಳಿಕ ಸಾವನ್ನಪ್ಪಿದ್ದರು ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ಎವರೆಸ್ಟ್​ನಲ್ಲಿ ಪರ್ವತಾರೋಹಿಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರ್ತಿದೆ. ಇದು ಜನದಟ್ಟಣೆ ಹಾಗೂ ಅನೇಕ ಸಾವುಗಳಿಗೆ ಕಾರಣವಾಗಿದೆ ಎನ್ನಲಾಗಿದೆ.

ಎವರೆಸ್ಟ್​ನಲ್ಲಿ ಜನದಟ್ಟಣೆಯನ್ನ ನಿಯಂತ್ರಿಸುವ ಸಲುವಾಗಿ ನೇಪಾಳ ಪ್ರವಾಸೋದ್ಯಮ ಇಲಾಖೆ ಹಲವು ಮಹತ್ವದ ಕ್ರಮಗಳನ್ನ ಕೈಗೊಳ್ಳುತ್ತಿದೆ. ಕಳೆದ ವರ್ಷ ಕೊರೊನಾದಿಂದಾಗಿ ಪರ್ವತಾರೋಹಿಗಳ ಸಂಖ್ಯೆ ಇಳಿಮುಖವಾಗಿತ್ತು. ಆದರೆ ನೇಪಾಳ ಪ್ರವಾಸೋದ್ಯಮ ಇಲಾಖೆ ಹೆಚ್ಚೆಚ್ಚು ಪರ್ವತಾರೋಹಿಗಳನ್ನ ಸೆಳೆಯುವ ಸಲುವಾಗಿ ಮಾರ್ಗಸೂಚಿಗಳನ್ನ ಸಡಿಲಗೊಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...