alex Certify ಚಳಿಯಲ್ಲಿ ನಡುಗುತ್ತಿದ್ದ ಹಕ್ಕಿಗೆ ಹೇರ್​ ಡ್ರೈಯರ್​ನಿಂದ ಗಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಯಲ್ಲಿ ನಡುಗುತ್ತಿದ್ದ ಹಕ್ಕಿಗೆ ಹೇರ್​ ಡ್ರೈಯರ್​ನಿಂದ ಗಾಳಿ

ಚಳಿಗಾಲ ಬಂತು ಅಂದ್ರೆ ಸಾಕು. ಪ್ರಾಣಿ – ಪಕ್ಷಿಗಳಿಗೆ ತುಂಬಾನೇ ಕಷ್ಟ. ಚಳಿ ಹೆಚ್ಚಿರುವ ಪ್ರದೇಶಗಳಲ್ಲಂತೂ ಮೂಕ ಪ್ರಾಣಿಗಳು ಸಾಯೋದೂ ಉಂಟು. ಆದರೆ ನಮ್ಮ ಮಾನವೀಯ ಗುಣ ಇಂತಹ ಅದೆಷ್ಟೋ ಮೂಕ ಪ್ರಾಣಿಗಳ ಆರೋಗ್ಯ ಕಾಪಾಡಬಲ್ಲುದು ಅನ್ನೋದಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ವಿಡಿಯೋವೇ ಸಾಕ್ಷಿ.

ಇಸ್ತಾನ್​ಬುಲ್​​​ನ ಸುಲ್ತಾನ್​ಗಾಝಿಯಲ್ಲಿ ವಿಪರೀತ ಚಳಿ ಬೀಳ್ತಿದೆ. ಈ ನಗರದ ನಿವಾಸಿಯಾದ ಸಬಹತ್ತೀನ್​​ ಯಿಲ್ಮಾಜ್​ ಎಂಬವರು ತಮ್ಮ ಮನೆಯ ಕಿಟಕಿ ಬಳಿ ಚಳಿ ತಾಳಲಾರದೇ ನಡುಗುತ್ತಿದ್ದ ಪಾರಿವಾಳವೊಂದನ್ನ ನೋಡಿದ್ದಾರೆ.

ಆದರೆ ಅದನ್ನ ಹಿಡಿದು ಮನೆಯೊಳಕ್ಕೆ ತರೋಣ ಅಂದ್ರೆ ಹಕ್ಕಿ ಕೈಗೆಟುಕದ ಜಾಗದಲ್ಲಿ ಕುಳಿತಿತ್ತು. ಹೀಗಾಗಿ ಸಬಹತ್ತೀನ್​ ಹೇರ್​ ಡ್ರೈಯರ್​ ಆನ್​​ ಮಾಡುವ ಮೂಲಕ ಪಾರಿವಾಳಕ್ಕೆ ಬೆಚ್ಚನೆ ಗಾಳಿ ಸಿಗುವಂತೆ ಮಾಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಸಬಹತ್ತೀನ್​ ಮಾನವೀಯತೆಗೆ ಸಲಾಂ ಎಂದಿದ್ದಾರೆ.

— Daily Mail Online (@MailOnline) November 12, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...