alex Certify ಗಂಟೆಗೆ 60 ಕಿಲೋಮೀಟರ್​ ವೇಗದಲ್ಲಿ ಸಂಚರಿಸುತ್ತೆ ಈ ಎಲೆಕ್ಟ್ರಿಕ್​ ಕಾರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಟೆಗೆ 60 ಕಿಲೋಮೀಟರ್​ ವೇಗದಲ್ಲಿ ಸಂಚರಿಸುತ್ತೆ ಈ ಎಲೆಕ್ಟ್ರಿಕ್​ ಕಾರು..!

ಪೆಟ್ರೋಲ್​ ಹಾಗೂ ಡೀಸೆಲ್​ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರೋದ್ರಿಂದ ಜನತೆ ಎಲೆಕ್ಟ್ರಿಕ್​ ವಾಹನಗಳತ್ತ ಮುಖ ಮಾಡ್ತಿದ್ದಾರೆ. ಹೀಗಾಗಿ ಕಾರು ತಯಾರಕ ಕಂಪನಿಗಳೂ ಸಹ ಗ್ರಾಹಕರ ಬೇಡಿಕೆಯಂತೆಯೇ ಎಲೆಕ್ಟ್ರಿಕ್​ ಕಾರುಗಳನ್ನ ಹೆಚ್ಚೆಚ್ಚು ಉತ್ಪಾದನೆ ಮಾಡುತ್ತಿವೆ.

ಇದೇ ಎಲೆಕ್ಟ್ರಿಕ್​ ಕಾರುಗಳ ಸಾಲಿಗೆ ಟೊಯೋಟೋದ C+pod ಕೂಡ ಸೇರಿದೆ. ಈ ಕಾರಿನ ಪ್ರಮುಖ ವಿಶೇಷತೆ ಅಂದ್ರೆ ಇದರ ಕಾರ್ಯಕ್ಷಮತೆ. ಈ ಕಾರು ಒಂದು ಬಾರಿ ಚಾರ್ಜ್​ ಮಾಡಿದ್ರೆ 150 ಕಿಲೋಮೀಟರ್​​ವರೆಗೆ ಪ್ರಯಾಣ ಮಾಡಲಿದೆ.

ಈ ಕಾರನ್ನ ಜಪಾನ್​​ನಲ್ಲಿ ಎರಡು ವೇರಿಯಂಟ್​ ಎಕ್ಸ್​ ಹಾಗೂ ಜಿನಲ್ಲಿ ಲಾಂಚ್​ ಮಾಡಲಾಗಿದೆ. ಇದರ ಬೆಲೆ ಕ್ರಮವಾಗಿ 11.73 ಲಕ್ಷ ರೂಪಾಯಿ ಹಾಗೂ 12.2 ಲಕ್ಷ ರೂಪಾಯಿ ಇದೆ. ಈ ಕಾರಿನಲ್ಲಿ ಅಳವಡಿಸಲಾದ ಎಲೆಕ್ಟ್ರಿಕ್​ ಮೋಟಾರ್​ 9.2 ಕಿಲೋವ್ಯಾಟ್​ ಸಾಮರ್ಥ್ಯ ಹೊಂದಿದೆ. ವಾಹನದ ತೂಕ 690 ಕಿಲೋ ಗ್ರಾಂ ಇದೆ.

ಒಂದು ಬಾರಿ ಮೋಟಾರ್​ ಚಾರ್ಜ್​ ಆಗಲು 5 – 16 ಗಂಟೆ ಸಮಯ ತೆಗೆದುಕೊಳ್ಳುತ್ತೆ. ಈ ಕಾರು ಗಂಟೆಗೆ 60 ಕಿಲೋಮೀಟರ್​ ವೇಗದಲ್ಲಿ ಸಂಚರಿಸುತ್ತೆ ಎಂದು ಕಂಪನಿ ಹೇಳಿದೆ. ಈ ಕಾರಿನ ಸೈಜ್​ ಸಣ್ಣದಿದ್ದು ಇಬ್ಬರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಈ ಕಾರನ್ನ ನಗರ ಪ್ರದೇಶದಲ್ಲಿ ಸಂಚಾರ ಮಾಡುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...