alex Certify ನಂಬಲಸಾಧ್ಯವಾದರೂ ಇದು ಸತ್ಯ…! ವಿಮಾನದಿಂದ ಬಿದ್ದ ಮೊಬೈಲ್ ಯಾವುದೇ ಹಾನಿಗೊಳಗಾಗದೆ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಂಬಲಸಾಧ್ಯವಾದರೂ ಇದು ಸತ್ಯ…! ವಿಮಾನದಿಂದ ಬಿದ್ದ ಮೊಬೈಲ್ ಯಾವುದೇ ಹಾನಿಗೊಳಗಾಗದೆ ಪತ್ತೆ

ಫೋನ್​ ಕೈನಿಂದ ಜಾರಿ ನೆಲಕ್ಕೆ ಬಿತ್ತು ಅಂದರೆ ಸಾಕು ಒಮ್ಮೆ ಹೃದಯ ಬಡಿತವೇ ನಿಂತಂತೆ ಭಾಸವಾಗುತ್ತೆ. ಅಂತದ್ರಲ್ಲಿ ನಿಮ್ಮ ಮೊಬೈಲ್​ ವಿಮಾನದಿಂದ ಕೆಳಗೆ ಬಿತ್ತು ಅಂದರೆ ಅದನ್ನ ಊಹಿಸಿಕೊಳ್ಳೋಕೆ ಸಾಧ್ಯವಿದೆಯೇ…?

ಆದರೆ ವಿಚಿತ್ರ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬರ ಮೊಬೈಲ್​ ಒಂದು ವಿಮಾನದಿಂದ ಕೆಳಕ್ಕೆ ಬಿದ್ದಿದೆ. ಮಾತ್ರವಲ್ಲದೇ ಆ ಮೊಬೈಲ್​​ನ್ನ ವಾಪಾಸ್​ ಕೂಡ ಪಡೆಯಲಾಗಿದೆ. ಅದೂ ಅಲ್ಲದೇ ಸಂಪೂರ್ಣ ದೃಶ್ಯಾವಳಿ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದೆ.

ಚಿತ್ರ ನಿರ್ಮಾಪಕ ಎರ್ನೆಸ್ಟೋ ಗಾಲ್ಯೋಟೋ ಎಂಬವರಿಗೆ ಸೇರಿದ ಐ ಫೋನ್​ 6, ವಿಮಾನದಿಂದ ಕೆಳಗೆ ಬಿದ್ದಿದೆ. ಆದರೆ ಜಿಪಿಎಸ್​ ಸಹಾಯದಿಂದ ಮೊಬೈಲ್​ನ್ನ ವಾಪಸ್​ ಪಡೆಯಲಾಗಿದೆ.

ವಿಚಿತ್ರ ಅಂದರೆ ಅಷ್ಟೊಂದು ಅಡಿ ಎತ್ತರದಿಂದ ಮೊಬೈಲ್​ ಬಿದ್ದಿದ್ದರೂ ಸಹ ಸಣ್ಣ ಗೀರು ಬಿಟ್ಟರೆ ಮೊಬೈಲ್​ಗೆ ಇನ್ಯಾವುದೇ ರೀತಿಯ ಹಾನಿ ಉಂಟಾಗಿಲ್ಲವಂತೆ.

ಸಂಪೂರ್ಣ ದೃಶ್ಯಾವಳಿಯನ್ನ ಎರ್ನೆಸ್ಟೋ ಯು ಟ್ಯೂಬ್​ನಲ್ಲಿ ಶೇರ್​ ಮಾಡಿದ್ದು ಲಕ್ಷಗಟ್ಟಲೇ ವೀವ್ಸ್ ಸಂಪಾದಿಸಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...