alex Certify ಆಕಾಶದಲ್ಲಿ ಮೂರನೇ ಬಾರಿಗೆ ಪ್ರತ್ಯಕ್ಷನಾದ ಜೆಟ್​ ಪ್ಯಾಕ್ ಮನುಷ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಕಾಶದಲ್ಲಿ ಮೂರನೇ ಬಾರಿಗೆ ಪ್ರತ್ಯಕ್ಷನಾದ ಜೆಟ್​ ಪ್ಯಾಕ್ ಮನುಷ್ಯ…!

Tony Stark Again? Pilot Captures Mysterious Footage as LA's Jetpack Man Sighted for Third Time2020ರಲ್ಲಿ ಕೊರೊನಾ ಹೊರತುಪಡಿಸಿ ನಮಗೆ ಆಘಾತವನ್ನುಂಟು ಮಾಡುವ ಅನೇಕ ವಿಷಯಗಳನ್ನ ನಾವು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ.

ಅದು ಫೆರಾರೋ ರೋಚರ್​ ಚಾಕಲೇಟ್​ನಿಂದ ಮಾಡಿದ ಮಂಚೂರಿಯನ್​ ಆಗಿರಲಿ ಇಲ್ಲವೇ ಮೆಣಸಿನಕಾಯಿ ಜಿಲೇಬಿ ಆಗಿರಲಿ. ಇದನ್ನೆಲ್ಲ ನೋಡಿದಾಗ ಈ ಜಗತ್ತು ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಅನೇಕರಲ್ಲಿ ಹುಟ್ಟಿದ್ದಂತೂ ನಿಜ.

ಇವೆಲ್ಲದರ ನಡುವೆ ಲಾಸ್​ ಎಂಜಲೀಸ್​ನಲ್ಲಿ ಜೆಟ್​ಪ್ಯಾಕ್​ ಮನುಷ್ಯನ ನೋಟವು ಪುನರಾವರ್ತನೆಯಾಗುತ್ತಿರುವ ವಿಲಕ್ಷಣ ಘಟನೆ ಪುನಾರವರ್ತಿತವಾಗುತ್ತಿದೆ.

ಈ ಘಟನೆ ಮೊದಲು ವರದಿಯಾಗಿದ್ದು ಸೆಪ್ಟೆಂಬರ್​ 2020ರಲ್ಲಿ. ಪೈಲಟ್​​ಗಳು ಈ ಜೆಟ್​ಪ್ಯಾಕ್​ ಮನುಷ್ಯನನ್ನ ಪತ್ತೆ ಮಾಡಿದ್ದರು. ನಂತರ ಫೆಡರಲ್​ ಬ್ಯುರೋ ಆಫ್​ ಇನ್ವೆಸ್ಟಿಗೇಷನ್​​ ತನಿಖೆ ಪ್ರಾರಂಭಿಸಿತು.

2020ರ ಅಕ್ಟೋಬರ್​​ನಲ್ಲಿ ಲಾಸ್​ ಎಂಜಲೀಸ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 6500 ಅಡಿ ಎತ್ತರದಲ್ಲಿ 2ನೇ ಬಾರಿಗೆ ಜೆಟ್​ಪ್ಯಾಕ್​ ಮನುಷ್ಯನನ್ನ ಗುರುತಿಸಲಾಗಿದೆ.

ಈ ಸಮಯದಲ್ಲಿ ಪೈಲಟ್​ ಜೆಟ್​ಪ್ಯಾಕ್​ ಮನುಷ್ಯನ ವಿಡಿಯೋವನ್ನ ಸೆರೆಹಿಡಿದಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಬಳಕೆದಾರರು ಹಂಚಿಕೊಂಡಿರುವ ವಿಡಿಯೋದಲ್ಲಿ ಮೋಡದ ಮಧ್ಯದಲ್ಲಿ ಚಲಿಸುತ್ತಿರೋದನ್ನ ಕಾಣಬಹುದಾಗಿದೆ. ಈ ವಿಡಿಯೋಗೆ ಸಾಕಷ್ಟು ಮಂದಿ ಕಾಮೆಂಟ್​ ಮಾಡಿದ್ದಾರೆ.

View this post on Instagram

A post shared by Sling Pilot Academy (@slingpilotacademy)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...