alex Certify ‘ಸತ್ತ’ ಲೇಖಕಿ ಮತ್ತೆ ಪ್ರತ್ಯಕ್ಷ; ಪೋಸ್ಟ್‌ ನೋಡುತ್ತಿದ್ದಂತೆ ನೆಟ್ಟಿಗರ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸತ್ತ’ ಲೇಖಕಿ ಮತ್ತೆ ಪ್ರತ್ಯಕ್ಷ; ಪೋಸ್ಟ್‌ ನೋಡುತ್ತಿದ್ದಂತೆ ನೆಟ್ಟಿಗರ ಆಕ್ರೋಶ

ಪ್ರಸಿದ್ಧ ಲೇಖಕಿ ಸುಸಾನ್ ಮೀಚೆನ್ ಮೃತಪಟ್ಟಿರುವುದಾಗಿ ಆಕೆಯ ಮಗಳು 2020ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದಾಗ, ಅದಕ್ಕೆ ಹಲವರು ಸಂತಾಪ ಸೂಚಿಸಿದ್ದರು. ಆಕೆಯ ಹಲವು ವಸ್ತುಗಳನ್ನು ಇದೇ ಸಂದರ್ಭದಲ್ಲಿ ಹರಾಜಿಗೆ ಇಡಲಾಗಿತ್ತು. ಇದರಿಂದ ಚೆನ್ನಾಗಿ ಆದಾಯವೂ ಬಂದಿತ್ತು. ಈಕೆ ಹೆಚ್ಚಾಗಿ ಪ್ರಣಯಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಿದ್ದಳು.

ಸಾವಿನ ಸುದ್ದಿ ಬಂದ ಕೆಲವು ದಿನಗಳ ಬಳಿಕ ಆಕೆಯ ಫೇಸ್​ಬುಕ್​ ಖಾತೆ ಚಾಲ್ತಿಯಲ್ಲಿ ಬಂತು. ಆಗ ಮಗಳು ತಾನು ಅಮ್ಮನ ಪರವಾಗಿ ಆಕೆಯ ಈ ಖಾತೆಯನ್ನು ಬಳಸಿಕೊಳ್ಳುತ್ತಿದ್ದೇನೆ. ನನ್ನ ತಾಯಿ ಅರ್ಧ ಬರೆದಿರುವ ಲೇಖನಗಳನ್ನು ಪೂರ್ಣಗೊಳಿಸುತ್ತಿದ್ದೇನೆ ಎಂದಿದ್ದರು.

ಎರಡು ವರ್ಷಗಳ ಬಳಿಕ ಸತ್ತುಹೋಗಿದ್ದ ಲೇಖಕಿ ಸುಸಾನ್​ ಮೀಚೆನ್ ದಿಢೀರ್​ ಕಾಣಿಸಿಕೊಂಡು ಎಲ್ಲರನ್ನೂ ದಿಗ್ಭ್ರಮೆಗೊಳಿಸಿದ್ದಾಳೆ. ಈ ಬಗ್ಗೆ ಪ್ರಶ್ನೆ ಕೇಳಿದಾಗ, ತಾನು ತಮಾಷೆ ಮಾಡಿದ್ದು, ತಾನಿನ್ನೂ ಬದುಕಿರುವುದಾಗಿ ಹೇಳಿಕೊಂಡಿದ್ದಾಳೆ. ದಿ ವಾರ್ಡ್ ಎಂಬ ಗ್ರೂಪ್​ನಲ್ಲಿ ಇದನ್ನು ಶೇರ್ ಮಾಡಿಕೊಂಡ ನಂತರ ಜನರ ಆಕ್ರೋಶಕ್ಕೆ ಕಾರಣವಾಗಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ಈಕೆಯ ವಿರುದ್ಧ ಹಲವರು ಕಿಡಿ ಕಾರುತ್ತಿದ್ದಾರೆ. ಮೃತಪಟ್ಟಿರುವುದಾಗಿ ಘೋಷಿಸಿಕೊಂಡು ವಸ್ತುಗಳನ್ನು ಹರಾಜು ಮಾಡಿ ದುಡ್ಡು ಗಳಿಸುವ ಸಲುವಾಗಿ ಹೀಗೆ ಮಾಡಿದ್ದಾರೆ ಎಂದು ಕಮೆಂಟ್​ ಮಾಡುತ್ತಿದ್ದಾರೆ. ಈ ಎರಡು ವರ್ಷಗಳಲ್ಲಿ ಲೇಖನ ಬರೆಯುವುದನ್ನು ಬಿಟ್ಟು ಈಕೆ ಟಿಕ್​ಟಾಕ್​ನಲ್ಲಿ ಕಾಣಿಸಿಕೊಂಡಿರುವುದು ತಿಳಿದು ಜನರು ಮತ್ತಷ್ಟು ಆಕ್ರೋಶಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...