alex Certify ಇದೇ ಇರಬಹುದಾ ಮುಂಬರುವ ದಿನಗಳ ಸಾರಿಗೆ ? ಕುತೂಹಲದ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದೇ ಇರಬಹುದಾ ಮುಂಬರುವ ದಿನಗಳ ಸಾರಿಗೆ ? ಕುತೂಹಲದ ವಿಡಿಯೋ ವೈರಲ್​

ಈಗ ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ಮನುಷ್ಯ ಏನು ಬೇಕಾದರೂ ಮಾಡಲು ಸಾಧ್ಯವಾದಂತಿದೆ. ತಂತ್ರಜ್ಞಾನವೇ ಇಲ್ಲದ ದಿನಗಳಲ್ಲಿ ಹಕ್ಕಿಯಂತೆ ಮನುಷ್ಯ ಆಕಾಶದಲ್ಲಿ ಹಾರಾಡುವುದಕ್ಕಾಗಿ ವಿಮಾನ ಕಂಡುಹಿಡಿದಿದ್ದ. ಆದರೆ ಇದೀಗ ಅದರ ಮುಂದುವರೆದ ಭಾಗವಾಗಿ ಖುದ್ದು ಮನುಷ್ಯನೇ ಆಕಾಶದಲ್ಲಿ ಹಾರಾಡಬಲ್ಲವನಾಗಿದ್ದಾರೆ.

ಇಂಥ ಅಚ್ಚರಿಯ ವಿಡಿಯೋ ಒಂದು ಇದೀಗ ವೈರಲ್​ ಆಗಿದ್ದು, ಜನರ ಕುತೂಹಲಕ್ಕೆ ಕಾರಣವಾಗಿದೆ. ಈ ವಿಡಿಯೋದಲ್ಲಿ ಮನುಷ್ಯನೊಬ್ಬ ಗಾಳಿಯಲ್ಲಿ ತೇಲಾಡುವುದನ್ನು ನೋಡಬಹುದಾಗಿದೆ.

ಮೊದಲಿಗೆ ವ್ಯಕ್ತಿಯೊಬ್ಬ ಜೆಟ್​ಪ್ಯಾಕ್​ ಹಾಕಿಕೊಂಡು ನೆಲದ ಮೇಲೆ ಸುಳಿದಾಡುತ್ತಿರುವುದನ್ನು ನೋಡಬಹುದು. ಈತ ತನ್ನ ಬೆನ್ನಿನ ಮೇಲೆ ಜೆಟ್‌ಪ್ಯಾಕ್ ಅನ್ನು ಹೊಂದಿದ್ದಾನೆ. ಈ ಜೆಟ್​ಪ್ಯಾಕ್​ನಿಂದ ಜ್ವಾಲೆಗಳು ಹೊರಬರುವುದನ್ನು ವಿಡಿಯೋದಲ್ಲಿ ಕಾಣಬಹುದು.

ತಕ್ಷಣ ಆ ವ್ಯಕ್ತಿ ತನ್ನ ತೋಳುಗಳನ್ನು ಚಾಚಿ ಜೆಟ್ ಪ್ಯಾಕ್ ಅನ್ನು ಬಳಸಿ ನೆಲದ ಮೇಲಿನಿಂದ ಮೇಲಕ್ಕೆ ಹಾರುತ್ತಾನೆ. ಇಡೀ ಗ್ರೌಂಡ್​ ಗಾಳಿಯಲ್ಲಿ ತೇಲಿಬಂದ ಮೇಲೆ ಪುನಃ ಲ್ಯಾಂಡಿಂಗ್​ ಆಗುತ್ತಾನೆ. ಇದನ್ನು ನೋಡಿ ನೆಟ್ಟಿಗರು ಮೂಕವಿಸ್ಮಿತರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...