2020ರಲ್ಲಿ ಕೊರೊನಾ ಹೊರತುಪಡಿಸಿ ನಮಗೆ ಆಘಾತವನ್ನುಂಟು ಮಾಡುವ ಅನೇಕ ವಿಷಯಗಳನ್ನ ನಾವು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ.
ಅದು ಫೆರಾರೋ ರೋಚರ್ ಚಾಕಲೇಟ್ನಿಂದ ಮಾಡಿದ ಮಂಚೂರಿಯನ್ ಆಗಿರಲಿ ಇಲ್ಲವೇ ಮೆಣಸಿನಕಾಯಿ ಜಿಲೇಬಿ ಆಗಿರಲಿ. ಇದನ್ನೆಲ್ಲ ನೋಡಿದಾಗ ಈ ಜಗತ್ತು ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಅನೇಕರಲ್ಲಿ ಹುಟ್ಟಿದ್ದಂತೂ ನಿಜ.
ಇವೆಲ್ಲದರ ನಡುವೆ ಲಾಸ್ ಎಂಜಲೀಸ್ನಲ್ಲಿ ಜೆಟ್ಪ್ಯಾಕ್ ಮನುಷ್ಯನ ನೋಟವು ಪುನರಾವರ್ತನೆಯಾಗುತ್ತಿರುವ ವಿಲಕ್ಷಣ ಘಟನೆ ಪುನಾರವರ್ತಿತವಾಗುತ್ತಿದೆ.
ಈ ಘಟನೆ ಮೊದಲು ವರದಿಯಾಗಿದ್ದು ಸೆಪ್ಟೆಂಬರ್ 2020ರಲ್ಲಿ. ಪೈಲಟ್ಗಳು ಈ ಜೆಟ್ಪ್ಯಾಕ್ ಮನುಷ್ಯನನ್ನ ಪತ್ತೆ ಮಾಡಿದ್ದರು. ನಂತರ ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್ ತನಿಖೆ ಪ್ರಾರಂಭಿಸಿತು.
2020ರ ಅಕ್ಟೋಬರ್ನಲ್ಲಿ ಲಾಸ್ ಎಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 6500 ಅಡಿ ಎತ್ತರದಲ್ಲಿ 2ನೇ ಬಾರಿಗೆ ಜೆಟ್ಪ್ಯಾಕ್ ಮನುಷ್ಯನನ್ನ ಗುರುತಿಸಲಾಗಿದೆ.
ಈ ಸಮಯದಲ್ಲಿ ಪೈಲಟ್ ಜೆಟ್ಪ್ಯಾಕ್ ಮನುಷ್ಯನ ವಿಡಿಯೋವನ್ನ ಸೆರೆಹಿಡಿದಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಬಳಕೆದಾರರು ಹಂಚಿಕೊಂಡಿರುವ ವಿಡಿಯೋದಲ್ಲಿ ಮೋಡದ ಮಧ್ಯದಲ್ಲಿ ಚಲಿಸುತ್ತಿರೋದನ್ನ ಕಾಣಬಹುದಾಗಿದೆ. ಈ ವಿಡಿಯೋಗೆ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ.
https://www.instagram.com/p/CJHqWoeBiLr/?utm_source=ig_web_copy_link