alex Certify ಹಾಡಹಗಲೇ ರಸ್ತೆಗೆ ಬಂದ ಹುಲಿ ನೋಡಿ ಬೆಚ್ಚಿಬಿದ್ದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಡಹಗಲೇ ರಸ್ತೆಗೆ ಬಂದ ಹುಲಿ ನೋಡಿ ಬೆಚ್ಚಿಬಿದ್ದ ಜನ

ಹುಲಿಗಳ ಹೆಸರು ಕೇಳಿದ್ರೇನೆ ಭಯವಾಗುತ್ತೆ. ಅಂತದ್ರಲ್ಲಿ ನೀವು ನಡೆದುಕೊಂಡು ಹೋಗುವ ರಸ್ತೆಯಲ್ಲೇ ಕಾಣಿಸಿಕೊಳ್ತು ಅಂದರೆ ಕತೆ ಏನಾಗಬೇಡ..? ಅದೇ ರೀತಿ ಟೆಕ್ಸಾಸ್​​ನ ಹೌಸ್ಟೊನ್​ ಎಂಬಲ್ಲಿ ಹುಲಿಯೊಂದು ರಸ್ತೆ ಮೇಲೆ ನಡೆದುಕೊಂಡು ಹೋಗಿದ್ದು ಅಲ್ಲೇ ಇದ್ದ ವ್ಯಕ್ತಿಯೊಬ್ಬ ಹುಲಿಗೆ ಗುರಿಯಾಗಿಸಿ ಬಂದೂಕನ್ನ ಹಿಡಿದಿರುವ ವಿಡಿಯೋ ವೈರಲ್​ ಆಗಿದೆ.

ವರದಿಗಳ ಪ್ರಕಾರ ಆರು ದಿನಗಳ ಬಳಿಕ ಕೊನೆಗೂ ಈ ಪ್ರಾಣಿಯನ್ನ ರಕ್ಷಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಇಂಡಿಯಾ ಎಂಬ ಹೆಸರನ್ನ ಹೊಂದಿದೆ ಎನ್ನಲಾದ ಈ ಹುಲಿಯು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿತ್ತು. ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬ ಹುಲಿಗೆ ಬಂದೂಕನ್ನ ತೋರಿಸಿದ್ದಾನೆ.

ಇದೇ ಏರಿಯಾದ ನಿವಾಸಿಯಾಗಿರುವ ವಿಕ್ಟರ್​ ಹ್ಯುಗೋ ಎಂಬವರು ಮನೆಯಿಂದ ಹೊರ ಬಂದು ಹುಲಿ ಮೇಲೆ ಗುಂಡು ಹಾರಿಸದಂತೆ ಮನವಿ ಮಾಡಿದ್ದಾರೆ. ಇದಾದ ಬಳಿಕ ಆ ವ್ಯಕ್ತಿ ತನ್ನ ಕಾರಿನಲ್ಲಿ ತೆರಳಿದ್ದಾನೆ.

ಬಳಿಕ ಕಾರಿನ ಸಮೇತ ಆ ವ್ಯಕ್ತಿಯನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಆತನ ಬಳಿ ಹುಲಿ ಇಲ್ಲದ್ದನ್ನ ನೋಡಿದ ಬಳಿಕ ಆ ಹುಲಿಯು ಈ ವ್ಯಕ್ತಿಗೆ ಸೇರಿದ್ದಲ್ಲ ಎಂದು ತಿಳಿದುಬಂದಿದೆ

ಈ ಘಟನೆ ನಡೆದ ಕೆಲ ದಿನಗಳ ಬಳಿಕ ಹುಲಿಯು ಮತ್ತೆ ಅದೇ ಪ್ರದೇಶದಲ್ಲಿ ತಿರುಗುತ್ತಿರೋದು ಕಂಡು ಬಂದಿದೆ. ಬಳಿಕ ಇದು ವಿಕ್ಟರ್​ ಹ್ಯುಗೋ ಹಾಗೂ ಅವರ ಪತ್ನಿಗೆ ಸೇರಿದ ಹುಲಿ ಎಂದು ತಿಳಿದಿದೆ.

ಪೊಲೀಸರು ಈ ಪ್ರಕರಣ ಸಂಬಂಧ ಸುದ್ದಿಗೋಷ್ಠಿ ನಡೆಸಿದ್ದು ಈ ಹುಲಿಯನ್ನ ಹಸ್ತಾಂತರಿಸಲು ವಿಕ್ಟರ್​ ಪತ್ನಿ ಒಪ್ಪಿದ್ದಾರೆ ಎಂದು ಹೇಳಿದ್ದಾರೆ. ಹೌಸ್ಟೊನ್​ ಪೊಲೀಸರು ಪೋಸ್ಟ್ ಮಾಡಿರುವ ಮತ್ತೊಂದು ವಿಡಿಯೋದಲ್ಲಿ ವಿಕ್ಟರ್​ ದಂಪತಿ ಹುಲಿಯನ್ನ ಮುದ್ದಿಸುತ್ತಿರೋದನ್ನ ಕಾಣಬಹುದಾಗಿದೆ.

— robwormald (@robwormald) May 10, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...