alex Certify ಮುರಿದ ಗೊಂಬೆಗಳನ್ನು ಸರಿ ಮಾಡಲೂ ಇದೆ ಕ್ಲಿನಿಕ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುರಿದ ಗೊಂಬೆಗಳನ್ನು ಸರಿ ಮಾಡಲೂ ಇದೆ ಕ್ಲಿನಿಕ್…!

ಹುಡುಗಿಯರು ಎಷ್ಟೇ ದೊಡ್ಡವರಾದರೂ ಸಹ ಅವರಿಗೆ ಟೆಡ್ಡಿ ಬಿಯರ್​ಗಳ ಮೇಲಿನ ಪ್ರೀತಿ ಕಡಿಮೆಯಾಗೋದಿಲ್ಲ. ಹಾಳಾದ ಗೊಂಬೆಗಳನ್ನ ಬಿಸಾಡೋಕೂ ಮನಸ್ಸಾಗದೇ ಅದನ್ನ ಇಟ್ಟುಕೊಳ್ಳೋಕೂ ಆಗದೇ ಕಷ್ಟ ಅನುಭವಿಸ್ತಾ ಇರೋರು ಹುಡುಕಿದ್ರೆ ಅನೇಕರು ಸಿಗ್ತಾರೆ.

ಆದರೆ ಟೋಕಿಯೋದಲ್ಲಿ ಮನುಷ್ಯರಂತೆ ಗೊಂಬೆಗಳಿಗೂ ಆಸ್ಪತ್ರೆ‌ ತೆರೆಯಲಾಗಿದೆ ನತ್ಸುಮಿ ಹೆಸರಿನ ಕ್ಲಿನಿಕ್​ ಗೊಂಬೆಗಳಿಗೆ ಟ್ರೀಟ್​ಮೆಂಟ್​ ಕೊಡುತ್ತದೆಯಂತೆ. ಇಲ್ಲಿ ಗೊಂಬೆಗಳಿಗೆ ಕಣ್ಣಿನ ಚಿಕಿತ್ಸೆ, ಕೂದಲು ಕಸಿ ಸೇರಿದಂತೆ ಅನೇಕ ಬಗೆಯ ಚಿಕಿತ್ಸೆ ಕೊಡಲಾಗುತ್ತೆ.

ಈ ಕ್ಲಿನಿಕ್​ನಲ್ಲಿ ತನ್ನ ಹಾಳಾದ ಗೊಂಬೆಯನ್ನ ಸರಿ ಮಾಡಿಸುವವರಲ್ಲಿ ಒಬ್ಬರಾದ 24 ವರ್ಷದ ಯು ಕಾಟೋ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ನನ್ನ ಗೊಂಬೆಯೊಂದು ಎಷ್ಟರ ಮಟ್ಟಿಗೆ ಹಳೆಯದಾಗಿತ್ತು ಅಂದರೆ ಅದನ್ನ ಬಿಸಾಡುವ ಬದಲು ಬೇರೆ ದಾರಿಯೇ ಇಲ್ಲ ಎಂದುಕೊಂಡಿದ್ದೆ. ಆದರೆ ಈ ವೇಳೆ ನಾನು ಈ ಗೊಂಬೆ ಕ್ಲಿನಿಕ್​ ಬಗ್ಗೆ ಕೇಳಲ್ಪಟ್ಟೆ. ಹೀಗಾಗಿ ನತ್ಸುಮಿ ಆಸ್ಪತ್ರೆಗೆ ಭೇಟಿ ನೀಡಿದೆ. ನನ್ನ ಗೊಂಬೆ ಈಗ ಹೊಸದಾಗಿದೆ ಅಂತಾ ಸಂತಸ ವ್ಯಕ್ತಪಡಿಸಿದ್ರು.
ಹಾಕೋಝಕಿ ಎಂಬವರು ಕಳೆದ ನಾಲ್ಕು ವರ್ಷಗಳಿಂದ ಈ ಕ್ಲಿನಿಕ್​ ನಡೆಸುತ್ತಿದ್ದಾರೆ. ವಸ್ತ್ರ ವಿನ್ಯಾಸ ಮಾಡ್ತಿದ್ದ ಹಾಕೋಝಕಿ ಬಳಿ ಅನೇಕರು ಗೊಂಬೆ ರಿಪೇರಿ ಮಾಡ್ತೀರಾ ಎಂದು ಕೇಳುತ್ತಿದ್ದರಂತೆ. ಇದರಿಂದ ಪ್ರೇರಣೆ ಪಡೆದ ಹಾಕೋಝಕಿ ಈ ಹೊಸ ಪ್ರಯತ್ನಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...